ಮಡಿಕೇರಿ, ಜು. ೨೦: ನಮ್ಮ ದೇಶದ ಉದ್ದಗಲಕ್ಕೂ ರಾಜ್ಯತ್ವ, ಕೇಂದ್ರಾಡಳಿತ ಪ್ರದೇಶ ಮತ್ತು ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಆಗ್ರಹಿಸುತ್ತಿರುವ ವಿವಿಧ ಹೋರಾಟಗಾರರ ಬೇಡಿಕೆಗಳನ್ನು ಪರಿಶೀಲಿಸಲು ೨ನೇ ರಾಜ್ಯ ಮರುಸಂಘಟನೆ ಆಯೋಗ ವನ್ನು ರಚಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸುತ್ತದೆ ಮತ್ತು ಜನಾಂಗೀಯ ರಾಜ್ಯ ಸ್ಥಾನಮಾನವನ್ನು ಹೊಂದಲು ಬಯಸುತ್ತದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಉತ್ತರಾಂದ್ರ ಚಳವಳಿಯ ನಾಯಕ, ನಿವೃತ್ತ ಐಆರ್‌ಎಸ್ ಅಧಿಕಾರಿ ಮೆಟ್ಟಾ ರಾಮರಾವ್ ಅವರು ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಆಯೋಜಿಸಿದ್ದ ೨ ನೇ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಏಕರೂಪದ ರಾಜ್ಯವಲ್ಲ, ಪ್ರಾಕೃತಿಕವಾಗಿ ವೈವಿಧ್ಯ ಮಯವಾಗಿದ್ದು, ೬ ಜನಾಂಗೀಯ ಭಾಷಾ ಪ್ರದೇಶಗಳನ್ನು ಒಳಗೊಂಡಿದೆ. ಹೈದರಬಾದ್ ಕರ್ನಾಟಕದ ಉರ್ದು ಮಾತನಾಡುವ ಪ್ರದೇಶ, ಮುಂಬೈ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶ, ಹಳೇ ಮೈಸೂರು ಕನ್ನಡ ಮಾತನಾಡುವ ಪ್ರದೇಶ, ತುಳುನಾಡು/ಮಂಗಳೂರು ತುಳು ಮಾತನಾಡುವ ಪ್ರದೇಶ ಅಂದರೆ ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಭಾಗ, ಕೊಂಕಣಿ ಮಾತನಾಡುವ ಪ್ರದೇಶ ಕಾರವಾರ, (ಕೆನರಾ ಜಿಲ್ಲೆ) ಇದು ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು.

ಬ್ರಿಟಿಷರ ಕಾಲದಲ್ಲಿ ಕೊಡವ ಲ್ಯಾಂಡ್ ಅನ್ನು “ಕೂರ್ಗ್” ಎಂದು ಕರೆಯಲಾಗುತ್ತಿತ್ತು. ಇತಿಹಾಸ ದುದ್ದಕ್ಕೂ ಕೂರ್ಗ್ ಎಕೆಎ ಕೊಡವ ಲ್ಯಾಂಡ್ ಸ್ವತಂತ್ರ ಪ್ರಾಂತ್ಯವಾಗಿತ್ತು. ಸ್ವಾತಂತ್ರö್ಯ ಪಡೆದ ನಂತರ, ಕೊಡವಲ್ಯಾಂಡ್ ಪ್ರತ್ಯೇಕ ಪ್ರಾಂತ್ಯವಾಗಿ ಉಳಿಯಿತು ಮತ್ತು ಮುಂದುವರೆ ಯಿತು. ಸಂವಿಧಾನದ ಅಂಗೀಕಾರದ ನಂತರ, ೧೯೫೨ ರಿಂದ ೧೯೫೬ ರವರೆಗೆ ಮರುಸಂಘಟನೆ ಕಾಯಿದೆ ಜಾರಿಗೆ ಬರುವವರೆಗೆ ಕೊಡವಲ್ಯಾಂಡ್ ಕೂರ್ಗ್ ರಾಜ್ಯವಾಗಿತ್ತು ಎಂದು ಮಾಹಿತಿ ನೀಡಿದರು. ರಾಜ್ಯವನ್ನಾಳಿ ದವರು ಶಾಶ್ವತವಾದ ಸಾಂವಿಧಾನಿಕ ಮತ್ತು ರಾಜಕೀಯ ಪರಿಹಾರವನ್ನು ಕಂಡು ಹಿಡಿಯುವ ಬದಲು ಕೊಡವ ಜನರ ಆಕಾಂಕ್ಷೆಗಳಿಗೆ ವಿರುದ್ಧವಾಗಿ ನಡೆದು ಕೊಂಡರು. ಇದು ಸಂವಿಧಾನದ ಆರ್ಟಿಕಲ್ ೨೪೪ ಖ/ ತಿ ೬ನೇ ಶೆಡ್ಯೂಲ್ ಅಡಿಯಲ್ಲಿ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ವಾಸಸ್ಥಳದೊಳಗೆ ಕೊಡವ ಜನಾಂಗಕ್ಕೆ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತವನ್ನು ಸಾಧಿಸಲು ಪ್ರೇರೇಪಿಸಿತು. ಇದರೊಂದಿಗೆ ಕೊಡವ ಬುಡಕಟ್ಟು ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆನ್ನುವ ಬಲವಾದ ಬೇಡಿಕೆಯ ಪರವಾಗಿಯೂ ಸಿಎನ್‌ಸಿ ಹೋರಾಟ ನಡೆಸುತ್ತಿದೆ ಎಂದು ನಾಚಪ್ಪ ಹೇಳಿದರು. ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಆಯೋಗದ ನೇತೃತ್ವದ ಭಾರತದ ಸಂವಿಧಾನ ಪರಿಶೀಲನಾ ಆಯೋಗ / ಸಿಆರ್‌ಸಿ ಕೊಡವ ಸ್ವಾಯತ್ತ ಮಂಡಳಿಯನ್ನು ರಚಿಸಲು ಶಿಫಾರಸ್ಸು ಮಾಡಿದೆ. ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆಯ ಕುರಿತು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಕಾನೂನು ಸಚಿವರು, ಕೇಂದ್ರ ಗೃಹ ಸಚಿವರು ಮತ್ತು ಕರ್ನಾಟಕ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಈಗ ನಾವು ಅವರ ಆಕ್ಷೇಪಣೆಗಾಗಿ ಕಾಯುತ್ತಿದ್ದೇವೆ ಎಂದರು. ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯತಿರಾಜುಲು ಮುಖ್ಯ ಭಾಷಣ ಮಾಡಿದರು. ಪ್ರಖ್ಯಾತ ಇತಿಹಾಸಕಾರ, ನಿವೃತ್ತ ಐಎಎಸ್ ಅಧಿಕಾರಿ, ಲೇಖಕ "ವೀ ದಿ ಪೀಪಲ್ ಆಫ್ ಸ್ಟೇಟ್ಸ್ ಆಫ್ ಭಾರತ್ - ದಿ ಮೇಕಿಂಗ್ ಅಂಡ್ ರೀಮೇಕಿಂಗ್ ಆಫ್ ಇಂಡಿಯಾಸ್ ಇಂಟರ್ನಲ್ ಬೌಂಡರೀಸ್"ನ ಡಾ. ಸಂಜೀವ್ ಚೋಪ್ರಾ ಅವರು ಸ್ವಯಂ ಆಡಳಿತ ಮತ್ತು ಫೆಡರಲಿಸಂ ಬಗ್ಗೆ ವಿವರಿಸಿದರು. ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ದೇಶದ ಪ್ರತ್ಯೇಕ ರಾಜ್ಯಗಳ ಹೋರಾಟಗಾರರು ಹಾಗೂ ಸಭಿಕರು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.