ವೀರಾಜಪೇಟೆ, ಜು. ೨೦: ಆರ್ಜಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಎರಡು ದಿನ ಶಾಲಾ ಸಂಸತ್ ನಡೆಸಲಾಯಿತು. ಮೊದಲ ದಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಸುಮಾರು ೩೪ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದರು. ಪ್ರಾಂಶುಪಾಲೆ ಮಮತಾ ಚುನಾವಣಾಧಿಕಾರಿಯಾಗಿ ನಾಮಪತ್ರಗಳನ್ನು ಪರಿಶೀಲನೆ ನಡೆಸಿದರು. ೨೮ ನಾಮಪತ್ರಗಳು ಸ್ವೀಕೃತಗೊಂಡವು. ನಂತರ ವಿದ್ಯಾರ್ಥಿಗಳು ಚುನಾವಣಾ ಪ್ರಚಾರ ಕೈಗೊಂಡರು.
ಎರಡನೇ ದಿನ ಮತದಾನ ನಡೆಸಲಾಯಿತು. ಮೊಬೈಲ್ನಲ್ಲಿ ಇವಿಎಂ ಆಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು. ನಂತರ ಹತ್ತನೇ ತರಗತಿಯಲ್ಲಿ ೪, ೯ನೇ ತರಗತಿಯಲ್ಲಿ ೪, ೮ನೇ ತರಗತಿಯಲ್ಲಿ ೪, ೭ನೇ ತರಗತಿಯಲ್ಲಿ ೩, ೬ನೇ ತರಗತಿಯಲ್ಲಿ ೩ ವಿದ್ಯಾರ್ಥಿಗಳು ಚುನಾಯಿತರಾದರು.
ಎರಡು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾಧಿಕಾರಿಯಾಗಿ ಪ್ರಾಂಶುಪಾಲೆ ಮಮತಾ, ರಿಟರ್ನಿಂಗ್ ಆಫೀಸರ್ ಆಗಿ ಸಮಾಜ ವಿಜ್ಞಾನ ಶಿಕ್ಷಕ ನಟರಾಜ ಸಿ. ಹಾಗೂ ಶಿವನಂಜಯ್ಯ, ನಾಗಮಣಿ, ಚಂದ್ರ ಜೆ., ಪುಟ್ಟಸ್ವಾಮಿ, ಪ್ರಕಾಶ್ ರಾಜ್, ಮನುಕುಮಾರ್, ಸುಮಿತ್ರ ಮತ್ತು ಕಂಪ್ಯೂಟರ್ ಶಿಕ್ಷಕಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ನಂತರ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯಿತು. ನಂತರ ಚುನಾಯಿತರಾದ ವಿದ್ಯಾರ್ಥಿಗಳಿಗೆ ಖಾತೆ ಹಂಚಿಕೆಯನ್ನು ಮಾಡಲಾಯಿತು.