ಶ್ರೀಮಂಗಲ, ಜು. ೨೦: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ-ಬಿರುನಾಣಿ ಮುಖ್ಯರಸ್ತೆಯಲ್ಲಿರುವ ಪೊರಾಡು ಗ್ರಾಮದಲ್ಲಿ ರಿವರ್ಸೈಡ್ ಅಸೋಸಿಯೇಷನ್ನಿಂದ ಮುಖ್ಯ ರಸ್ತೆಯ ಇಕ್ಕೆಲದ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಶ್ರಮದಾನದಲ್ಲಿ ಅಸೋಸಿಯೇಷನ್ನ ಅಧ್ಯಕ್ಷ ಮೀದೇರಿರ ಕುಟ್ಟಪ್ಪ, ಕಾರ್ಯದರ್ಶಿ ಬಲ್ಯಮೀದೇರಿರ ಮೋಹನ್ ಕುಮಾರ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.