ಗೋಣಿಕೊಪ್ಪ ವರದಿ, ಜು. ೨೦: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿವಿಧ ಜಾತಿಯ ಗಿಡಗಳನ್ನು ವಿತರಣೆ ಮಾಡಿ, ಆವರಣದಲ್ಲಿ ನೆಡಲಾಯಿತು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮೂಡಿಸಿದರು. ಗಿಡ ನೆಡುವುದರ ಮಹತ್ವ, ಆಮ್ಲಜನಕ ಉತ್ಪತ್ತಿ ಬಗ್ಗೆ ಸಲಹೆ ನೀಡಿದರು.
ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಕುಂಞÂಯAಡ ಅರುಣ್ ತಮ್ಮಯ್ಯ, ಕಾರ್ಯದರ್ಶಿ ತೀತಮಾಡ ಮೋಹನ್, ಪದಾಧಿಕಾರಿಗಳಾದ ನೆವಿನ್, ಕಿಶೋರ್ ಮಾದಪ್ಪ, ಡೀನಾ ಇದ್ದರು.