ಶನಿವಾರಸಂತೆ, ಜು. ೨೧: ಶನಿವಾರಸಂತೆ ಕೊಡ್ಲಿಪೇಟೆ ಹೋಬಳಿಯಾದ್ಯಂತ ೩ ದಿನಗಳಿಂದ ಪುಷ್ಯ ಮಳೆ ರಭಸದ ಗಾಳಿಯೊಂದಿಗೆ ಧಾರಾಕಾರವಾಗಿ ನಿರಂತರ ಸುರಿಯುತ್ತಿದೆ. ಅಲ್ಲಲ್ಲಿ ಗಾಳಿ-ಮಳೆಗೆ ಮರಗಳು, ಮನೆ ಗೋಡೆಗಳು ಕುಸಿಯುತ್ತಿರುವ ಬಗ್ಗೆ ವರದಿಯಾಗಿದೆ. ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ನಿವಾಸಿ ಅಬ್ಬಾಸ್ ಅವರ ಮನೆಯ ಸುತ್ತ ನಿರ್ಮಿಸಿದ್ದ ತಡೆಗೋಡೆ ಗುರುವಾರದ ಮಳೆಯ ರಭಸಕ್ಕೆ ಕುಸಿದು ಧರೆಗುರುಳಿದೆ. ಅಂದಾಜು ರೂ. ೨ ಲಕ್ಷ ನಷ್ಟ ಸಂಭವಿಸಿದೆ ಎಂದು ಅಬ್ಬಾಸ್ ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಕೊಡ್ಲಿಪೇಟೆ ನಾಡ ಕಚೇರಿ ಕಂದಾಯ ಪರಿವೀಕ್ಷಕ ಎನ್.ಜೆ. ಮನುಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಚೈತ್ರಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮಳೆ ಹಾನಿಗೊಳಗಾಗಿರುವ ಅಬ್ಬಾಸ್ ಅವರಿಗೆ ಸರ್ಕಾರ ಪ್ರಕೃತಿ ವಿಕೋಪ ನಿಧಿಯಿಂದ ಸೂಕ್ತ ಪರಿಹಾರ ನೀಡುವಂತೆಯೂ ಗ್ರಾಮ ಪಂಚಾಯಿತಿ ವತಿಯಿಂದ ಪುನಃ ತಡೆಗೋಡೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಆರ್. ವೇದಕುಮಾರ್ ಹಾಗೂ ಇತರ ಗ್ರಾಮ ಮುಖಂಡರು ಮನವಿ ಮಾಡಿದ್ದಾರೆ.ಸುಂಟಿಕೊಪ್ಪ, ಜು. ೨೧: ಗಾಳಿ ಮಳೆಗೆ ಮಟತ್ ಕಾಡು ಹಾಗೂ ಸುಂಟಿಕೊಪ್ಪದಲ್ಲಿ ಎರಡು ವಿದ್ಯುತ್ ಕಂಬ ನೆಲ ಕಚ್ಚಿದ್ದು ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸರಿಪಡಿಸಿದರು.

ಗುರುವಾರ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ನೆಟ್ಲಿ ಬಿ. ತೋಟದ ಮರವೊಂದು ರಸ್ತೆಗೆ ಅಡ್ಡವಾಗಿ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿ ಸುಂಟಿಕೊಪ್ಪದಿAದ ನಾಕೂರಿಗೆ ತೆರಳುವ ಪ್ರಯಾಣಿಕರಿಗೆ ಅರ್ಧ ಗಂಟೆ ಅಡಚಣೆಯುಂಟಾಗಿತ್ತು. ಅಲ್ಲದೆ ಈ ಭಾಗದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು. ನಂತರ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.ಸಿದ್ದಾಪುರ, ಜು. ೨೧: ಗಾಳಿ ಮಳೆಗೆ ಅಮ್ಮತ್ತಿ ಸಮೀಪದ ಕಾವಡಿಯಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡು ಸಮಸ್ಯೆ ಎದುರಾಗಿದೆ. ದುರಸ್ತಿ ಕಾರ್ಯದಲ್ಲಿ ಚೆಸ್ಕಾಂ ಸಿಬ್ಬಂದಿಗಳು ಪ್ರಯತ್ನಪಡುತ್ತಿದ್ದಾರೆ ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ.

ಕರಿಕೆ, ಜು. ೨೧: ಕೆಲದಿನಗಳಿಂದ ಗ್ರಾಮದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಗೆ ಅಡಿಕೆ, ಗೇರು, ರಬ್ಬರ್ ಮರಗಳು ಮುರಿದು ಬಿದ್ದ ಪರಿಣಾಮ ವಿಪರೀತ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಚೆತ್ತುಕಾಯ ಹದಿಮೂರನೇ ಮೈಲು ಜಾನಕಿ ಅವರ ಅಡಿಕೆ ಮರಗಳು ನೆಲಕಚ್ಚಿದ್ದು, ಪಚ್ಚೆ ಪಿಲಾವು ಜನಾರ್ದನ ಎಂಬವರಿಗೆ ಸೇರಿದ ಗೇರು ಮರಗಳು ಮುರಿದು ಬಿದ್ದಿವೆ. ನಾಪೋಕ್ಲು, ಜು. ೨೧: ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಗಾಳಿ-ಮಳೆಗೆ ಗ್ರಾಮದ ನಿವಾಸಿ ನಸೀಮ ಎಂಬವರು ವಾಸವಾಗಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟ್‌ಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಕಂದಾಯ ಪರಿವೀಕ್ಷಕ ರವಿಕುಮಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.ನಾಪೋಕ್ಲು, ಜು. ೨೧: ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಗಾಳಿ-ಮಳೆಗೆ ಗ್ರಾಮದ ನಿವಾಸಿ ನಸೀಮ ಎಂಬವರು ವಾಸವಾಗಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟ್‌ಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಕಂದಾಯ ಪರಿವೀಕ್ಷಕ ರವಿಕುಮಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.ಸುAಟಿಕೊಪ್ಪ, ಜು. ೨೧ : ಅತಿಯಾದ ಗಾಳಿ ಮಳೆಗೆ ಮನೆ ಮೇಲೆ ಭಾರೀ ಗಾತ್ರದ ಬೀಟಿ ಮರ ಬಿದ್ದಿದ್ದು ಅದೃಷ್ಟವಶಾತ್ ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ೭ನೇ ಮೈಲು ಗ್ರಾಮದ ವಿಕ್ರಮ್ ಬಡಾವಣೆಯ ವಸಂತಿ ಎಂಬವರ ಮನೆ ಮೇಲೆ ರಾತ್ರಿ ಬೀಸಿದ ಗಾಳಿ ಮಳೆಗೆ ಭಾರೀ ಗಾತ್ರದ ಬೀಟಿ ಮರ ಬಿದ್ದ ಪರಿಣಾಮ ಅಡುಗೆ ಕೋಣೆ, ಶೌಚಾಲಯ ಸಂಪೂರ್ಣ ನೆಲಸಮವಾಗಿ ಸುಮಾರು ರೂ. ೫೦ ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮನೆಯಲ್ಲಿ ವಸಂತಿ ಹಾಗೂ ಮಗ ಮನು ಬೇರೆ ಕೋಣೆಯಲ್ಲಿ ಮಲಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಸಮೀಪ ನಿಲ್ಲಿಸಿದ್ದ ಕಾರಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಸ್ಥಳಕ್ಕೆ ಕೂಡಲೇ ಗ್ರಾಮ ಆಡಳಿತಾಧಿಕಾರಿ ಬಿ.ಎನ್. ಜಯಂತ್ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮರವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು. ಅರಣ್ಯಾಧಿಕಾರಿ ದೇವಯ್ಯ, ಅರಣ್ಯ ರಕ್ಷಕ ಸಿದ್ಧರಾಜು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೆಂಕಪ್ಪ ಪೂಜಾರಿ, ಸದಸ್ಯರಾದ ಆನಂದ, ಪಾರ್ವತಿ, ಹಾಜರಿದ್ದರು. ಮಡಿಕೇರಿ, ಜು. ೨೧: ಇಲ್ಲಿಗೆ ಸಮೀಪದ ಮಂಗಳಾದೇವಿ ನಗರದ ರೋಷನಾರ ಕೆರೆ ಬಳಿ ಇಂದು ಬೆಳಿಗ್ಗೆ ಬೃಹತ್ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದು ಹಾನಿ ಉಂಟಾಗಿದೆ. ನಂತರ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಗೊಳಿಸಲಾಯಿತು.