ಮಡಿಕೇರಿ, ಜು. ೨೦: ಮಡಿಕೇರಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಡಿ. ಮಧುಕರ್ ಶೇಟ್, ಕಾರ್ಯದರ್ಶಿಯಾಗಿ ನಟರಾಜ್ ಕೆಸ್ತೂರು, ಜಂಟಿ ಕಾರ್ಯ ದರ್ಶಿಯಾಗಿ ಎಂ.ಪಿ. ನಾಗೇಂದ್ರ, ಖಜಾಂಚಿಯಾಗಿ ಎನ್.ಬಿ. ರವಿ, ಉಪಾಧ್ಯಕ್ಷರಾಗಿ ಲಯನ್ ದಿನೇಶ್ ರಾವ್, ಜೆ.ವಿ. ಕೋಟಿ, ಟೇಮರ್ ಆಗಿ ಹೆಚ್.ಟಿ. ಚಾಮ, ಟೈಲ್ ಟ್ವಿಸ್ಟರ್ ಆಗಿ ಕಮಲಾ ಮುರುಗೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಯಾಗಿ ಮೋಹನ್ ಕುಮಾರ್, ಸದಸ್ಯತ್ವ ಸಮಿತಿಯ ಅಧ್ಯಕ್ಷರಾಗಿ ಎಂ.ಎ. ನಿರಂಜನ್, ಕ್ಲಬ್ ಮೇಲ್ವಿ ಚಾರಕರಾಗಿ ಬಿ.ವಿ. ಮೋಹನ್ ದಾಸ್, ಎಲ್‌ಸಿಐಎಫ್ ಅಧ್ಯಕ್ಷರಾಗಿ ಕವಿತಾ ಕಾವೇರಮ್ಮ, ನಿರ್ದೇಶಕರು ಗಳಾಗಿ ಕೆ.ಮಧುಕರ್, ಪಿ.ಪಿ. ಸೋಮಣ್ಣ, ಎಸ್.ಬಿ. ಮುರುಗೇಶ್, ಸಂಗೀತಾ ಮೋಹನ್‌ದಾಸ್, ಕೆ.ಕೆ. ದಾಮೋದರ್, ಕೆ.ಟಿ. ಬೇಬಿ ಮ್ಯಾಥ್ಯು, ಡಿ.ಜಿ. ಕಿಶೋರ್, ಅಗಸ್ಟಿನ್ ಜಯರಾಜ್ ಪ್ರಮಾಣ ವಚನ ಸ್ವೀಕರಿಸಿದರು. ಲಯನ್ಸ್ ಸಂಸ್ಥೆ ೩೧೭ ಡಿ ಯ ೨ನೇ ಉಪ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಅವರು ಪದಗ್ರಹಣ ಸಮಾರಂಭ ನಡೆಸಿಕೊಟ್ಟರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸದಸ್ಯರಿಗೆ ಕರೆ ನೀಡಿದರು. ನೂತನ ಅಧ್ಯಕ್ಷ ಮಧುಕರ್ ಶೇಟ್ ಮಾತನಾಡಿ, ಹಿಂದಿನ ಅಧ್ಯಕ್ಷರುಗಳ ಸೇವೆಯನ್ನು ಸ್ಮರಿಸಿದರು. ೧೦ ಸೆಂಟ್ ಜಾಗವನ್ನು ಉಚಿತವಾಗಿ ಕುಪ್ಪಂಡ ಚಿಮ್ಮಿ ಕುಟ್ಟಯ್ಯ ಅವರು ತಮ್ಮ ತಂದೆ ಪಾಂಡAಡ ನಂಜಪ್ಪ ಅವರ ಜ್ಞಾಪಕಾರ್ಥ ನೀಡಿದ ಫಲವಾಗಿ ಸಂಸ್ಥೆಗೆ ಸ್ವಂತ ಕಟ್ಟಡದ ಭಾಗ್ಯ ಲಭಿಸಿತು ಎಂದರು.

ನಿರ್ಗಮಿತ ಅಧ್ಯಕ್ಷೆ ಕವಿತಾ ಕಾವೇರಮ್ಮ ಮಾತನಾಡಿ, ೨೦೨೨-೨೩ನೇ ಸಾಲಿನ ಎಲ್ಲಾ ಸೇವಾ ಕಾರ್ಯಗಳಲ್ಲಿ ಸಹಕಾರ ನೀಡಿದ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿ, ನೂತನ ಸಮಿತಿಗೆ ಶುಭ ಕೋರಿದರು. ಮಡಿಕೇರಿ ವಕೀಲರ ಸಂಘದ ಆಡಳಿತ ಮಂಡಳಿಗೆ ಸಂಸ್ಥೆಯ ಸದಸ್ಯ ಲಯನ್ ಎಂ.ಎ. ನಿರಂಜನ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ರಾಯಭಾರಿ ಧನು ಉತ್ತಯ್ಯ, ಸಂಯೋಜಕ ಪಂಚA ತಿಮ್ಮಯ್ಯ, ಪ್ರತಿಭಾ ಮಧುಕರ್ ಶೇಟ್, ಮಮತಾ ಶೆಣೈ, ವಲಯಾಧ್ಯಕ್ಷರುಗಳಾದ ರೋಹಿತ್, ಬಾಲಕೃಷ್ಣ ಹಾಗೂ ಸತೀಶ್ ಉಪಸ್ಥಿತರಿದ್ದರು.

ಸ್ಕಂದ ಮಧುಕರ್ ಶೇಟ್ ಪ್ರಾರ್ಥಿಸಿ, ೨೨-೨೩ನೇ ಸಾಲಿನ ಅಧ್ಯಕ್ಷ ಲಯನ್ ಕವಿತಾ ಕಾವೇರಮ್ಮ ಸ್ವಾಗತಿಸಿ, ಸತೀಶ್ ರೈ ಧ್ವಜ ವಂದನೆ ನೆರವೇರಿಸಿದರು. ಮೋಹನ್‌ಕುಮಾರ್ ಲಯನ್ಸ್ನ ನೀತಿ ಸಂಹಿತೆಯನ್ನು ವಾಚಿಸಿದರು. ನೂತನ ಅಧ್ಯಕ್ಷ ಮಧುಕರ್ ಶೇಟ್ ಹಾಗೂ ಪ್ರತಿಭಾ ಮಧುಕರ್ ಶೇಟ್ ಇತರ ಸದಸ್ಯರೊಂದಿಗೆ ದೀಪ ಬೆಳಗಿದರು. ಬೊಳ್ಳಪ್ಪ, ಕಿಶೋರ್ ಹಾಗೂ ನಿರಂಜನ್ ೨೩-೨೪ನೇ ಸಾಲಿನ ಸಮಿತಿ ಸದಸ್ಯರನ್ನು ಹಾಗೂ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ನಟರಾಜ್ ಕೆಸ್ತೂರು ವಂದಿಸಿದರು.