ನಾಪೋಕ್ಲು:, ಜು. ೨೧: ಪಟ್ಟಣದ ಅಂಗನವಾಡಿಯ ಸುತ್ತಲಿನ ಕಳೆಗಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಇಲ್ಲಿನ ಶೌರ್ಯ ತಂಡದ ಸದಸ್ಯರು ಶ್ರಮದಾನ ಮಾಡಿದರು. ಅಂಗನವಾಡಿ ಸುತ್ತಮುತ್ತ ಕಳೆಗಳು ತುಂಬಿ ಮಕ್ಕಳಿಗೆ ಓಡಾಡಲು ಸಮಸ್ಯೆ ಆಗುತ್ತಿತ್ತು. ಅಂಗನವಾಡಿ ಪರಿಸರ ಸ್ವಚ್ಛ ಮಾಡಿ ಕೊಡುವಂತೆ ಅಂಗನವಾಡಿ ಶಿಕ್ಷಕಿ ಜ್ಯೋತಿ ಕೋರಿಕೊಂಡಿದ್ದರು. ತಂಡದ ಸದಸ್ಯರು ಅಂಗನವಾಡಿ ಸುತ್ತಲಿನ ಕಳೆ ನಿರ್ಮೂಲನೆ ಮಾಡಿ ಮಳೆ ನೀರು ಹರಿದು ಹೋಗಲು ಅನುವು ಮಾಡಿಕೊಟ್ಟರು. ಈ ಸಂದರ್ಭ ಮೇಲ್ವಿಚಾರಕರಾದ ಸುನಿಲ್, ಸಂಯೋಜಕಿ ಬಾಳೆಯಡ ದಿವ್ಯ, ಶಂಕರ್, ದಿಲೀಶ್, ರವಿ, ಶರವಣ, ಉಮಾಲಕ್ಷಿö್ಮ, ಶ್ಯಾಮಲಾ, ಚಂದ್ರಕಲ, ಅಂಗನವಾಡಿ ಸಹಾಯಕಿ ಸರೋಜ ಉಪಸ್ಥಿತರಿದ್ದರು.