ಕುಶಾಲನಗರ, ಜು. ೨೧: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾ. ೩೧ ರಂದು ಪತ್ರಿಕಾ ದಿನಾಚರಣೆ, ಅತ್ಯುತ್ತಮ ವರದಿಗಳಿಗೆ ಸಂಘದ ಸದಸ್ಯರುಗಳಿಗೆ ನೀಡಲಾಗುವ ದತ್ತಿ ನಿಧಿ ಪ್ರಶಸ್ತಿ ವಿತರಣೆ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುಶಾಲನಗರದ ಕಾವೇರಿ ನಿಸರ್ಗಧಾಮ ಆವರಣದಲ್ಲಿ ನಡೆಯಲಿದೆ.
ಅತ್ಯುತ್ತಮ ವರದಿಗಳಿಗೆ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ - ತಾಲೂಕು ಸಂಘದ ವತಿಯಿಂದ ಈ ಬಾರಿ ೬ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಲಾಗುವುದು.
ಸಂಘದ ಸದಸ್ಯೆ ವನಿತಾ ಚಂದ್ರಮೋಹನ್ ಅವರ ತಾಯಿ ಐನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ.ಐನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮ ಮಾನವೀಯ ವರದಿಗೆ, ಸಂಘದ ಸದಸ್ಯ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ, ತಾಯಿ ದಿ. ಎಂ. ನಾರಾಯಣ, ಎನ್. ಪದ್ಮಾವತಿ ಅವರ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ, ಮಾಜಿ ಸಚಿವರು ಹಾಗೂ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಅತ್ಯುತ್ತಮ ರಾಜಕೀಯ ವರದಿಗೆ, ಕುಶಾಲನಗರದ ಶಾರದ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಸಹಕಾರ ಸಂಘದ ವರದಿ, ಸಂಘದ ಸದಸ್ಯ ಟಿ.ಆರ್. ಪ್ರಭುದೇವ್ ಅವರ ತಂದೆ ದಿ. ಎನ್. ರಾಮಕೃಷ್ಣ ಮತ್ತು ತಾಯಿ ದಿ. ಕೆ.ಎಂ. ಸರಸಮ್ಮ ಇವರ ನೆನಪಿಗಾಗಿ ನೊಂದವರ ಪರವಾಗಿ ಪ್ರಕಟಗೊಂಡ ಅತ್ಯುತ್ತಮ ವರದಿಗೆ ಮತ್ತು ಸಂಘದ ಸದಸ್ಯರಾದ ಕೆ.ಬಿ. ಷಂಶುದ್ದೀನ್ ಅವರು ತಮ್ಮ ತಾಯಿ ದಿ. ಕೆ.ಕೆ. ಖತೀಜ ಅವರ ಸ್ಮರಣಾರ್ಥ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗಳಿಗೆ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಬ್ಬರು ಒಂದು ವರದಿಯನ್ನು ಮಾತ್ರ ಕಳುಹಿಸಬಹುದು. ವರದಿಯಲ್ಲಿ ಬೈಲೈನ್ ಇಲ್ಲದಿದ್ದಲ್ಲಿ ಸಂಪಾದಕರಿAದ ದೃಢೀಕರಣ ಪತ್ರ ಕಡ್ಡಾಯ ನೀಡುವುದು. ವರದಿಯ ಒಂದು ಪತ್ರಿಕೆಯ ಪ್ರತಿ ಮತ್ತು ಅದರ ಎರಡು ನಕಲು ಪ್ರತಿಗಳನ್ನು ಕಳುಹಿಸುವುದು. ಅರ್ಜಿಯಲ್ಲಿ ತಮ್ಮ ವಿವರ ಮತ್ತು ಒಂದು ಭಾವಚಿತ್ರ ಪ್ರಶಸ್ತಿಗೆ ಸಂಬAಧಿಸಿದAತೆ ಆಯಾಯ ವಿಭಾಗಕ್ಕೆ ಕಳಿಸಿಕೊಡುತ್ತಿರುವ ಬಗ್ಗೆ ಅರ್ಜಿಯಲ್ಲಿ ಸಮರ್ಪಕ ಮಾಹಿತಿ ಒದಗಿಸಬೇಕು.
೨೦೨೨ ಜನವರಿ ಒಂದರಿAದ ೨೦೨೨ ಡಿಸೆಂಬರ್ ೩೧ ರೊಳಗೆ ಪ್ರಕಟಗೊಂಡಿರುವ ವರದಿಯನ್ನು ಮಾತ್ರ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸಲು ತಾ. ೨೨ ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿಗಳನ್ನು ವನಿತಾ ಚಂದ್ರಮೋಹನ್ ಪ್ರಧಾನ ಕಾರ್ಯದರ್ಶಿಗಳು ಅಂಚೆ ಪೆಟ್ಟಿಗೆ ಸಂಖ್ಯೆ ೫೬, ಕುಶಾಲನಗರ ಅಂಚೆ ಕಚೇರಿ, ಕುಶಾಲನಗರ ೫೭೧೨೩೪ ವಿಳಾಸಕ್ಕೆ ಕಳುಹಿಸುವಂತೆ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.