ವೀರಾಜಪೇಟೆ, ಜು. ೧೯: ನಿರ್ಮಿತಿ ಕೇಂದ್ರಗಳು ಕೇವಲ ಕಳಪೆ ಕಾಮಗಾರಿಯ ಹಣೆಪಟ್ಟಿ ಅಂಟಿಸಿಕೊAಡಿವೆ. ವೀರಾಜಪೇಟೆ ಯಲ್ಲಿ ಮೀನು ಮಾರುಕಟ್ಟೆ, ಅಂಬೇಡ್ಕರ್ ಭವನ ಸೇರಿದಂತೆ ನಿರ್ಮಿತಿ ಕೇಂದ್ರದಿAದ ನಿರ್ಮಾಣವಾದ ಯಾವ ಕಟ್ಟಡವೂ ವೈಜ್ಞಾನಿಕವಾಗಿ ಕಾಮಗಾರಿ ನಡೆದಿಲ್ಲ; ಹಾಗಾಗಿ ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾಮಗಾರಿ ನೀಡದಂತೆ ಪುರಸಭೆ ಸದಸ್ಯರುಗಳ ಒತ್ತಾಯದ ಮೇರೆಗೆ ನಿರ್ಣಯ ಕೈಗೊಳ್ಳಲಾಯಿತು.
ಪುರಭವನದಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್ ನೇತೃತ್ವದಲ್ಲಿ ಪುರಸಭೆ ಸದಸ್ಯರ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ವೀರಾಜಪೇಟೆ ಪುರಸಭೆಗೆ ನೂತನ ಕಚೇರಿ, ನೂತನ ಪುರಭವನ, ತರಕಾರಿ ಮಾರುಕಟ್ಟೆ, ವೀರಾಜಪೇಟೆ, ಜು. ೧೯: ನಿರ್ಮಿತಿ ಕೇಂದ್ರಗಳು ಕೇವಲ ಕಳಪೆ ಕಾಮಗಾರಿಯ ಹಣೆಪಟ್ಟಿ ಅಂಟಿಸಿಕೊAಡಿವೆ. ವೀರಾಜಪೇಟೆ ಯಲ್ಲಿ ಮೀನು ಮಾರುಕಟ್ಟೆ, ಅಂಬೇಡ್ಕರ್ ಭವನ ಸೇರಿದಂತೆ ನಿರ್ಮಿತಿ ಕೇಂದ್ರದಿAದ ನಿರ್ಮಾಣವಾದ ಯಾವ ಕಟ್ಟಡವೂ ವೈಜ್ಞಾನಿಕವಾಗಿ ಕಾಮಗಾರಿ ನಡೆದಿಲ್ಲ; ಹಾಗಾಗಿ ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾಮಗಾರಿ ನೀಡದಂತೆ ಪುರಸಭೆ ಸದಸ್ಯರುಗಳ ಒತ್ತಾಯದ ಮೇರೆಗೆ ನಿರ್ಣಯ ಕೈಗೊಳ್ಳಲಾಯಿತು.
ಪುರಭವನದಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್ ನೇತೃತ್ವದಲ್ಲಿ ಪುರಸಭೆ ಸದಸ್ಯರ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ವೀರಾಜಪೇಟೆ ಪುರಸಭೆಗೆ ನೂತನ ಕಚೇರಿ, ನೂತನ ಪುರಭವನ, ತರಕಾರಿ ಮಾರುಕಟ್ಟೆ, ನಿರ್ದೇಶನದ ಮೇರೆಗೆ ಪುರಭವನದ ಕಟ್ಟಡ, ಪುರಭವನ, ತರಕಾರಿ ಮಾರುಕಟ್ಟೆ, ದನದ ದೊಡ್ಡಿ ನಿರ್ಮಾಣ ಮಾಡಲು ಡಿಪಿಆರ್ ಮಾಡುವ ಸಲುವಾಗಿ ಸಭೆಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರ ಸಭೆ ಕರೆಯಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ಸದಸ್ಯರು ತಮ್ಮ ಅಭಿಪ್ರಾಯ ಹಾಗೂ ಸಲಹೆ ಸೂಚನೆ ನೀಡಿದರೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಅದಕ್ಕೆ ಅನುಗುಣವಾಗಿ ಡಿಪಿಆರ್ ಸಿದ್ಧಪಡಿಸಿ ನೀಡುತ್ತಾರೆ ಎಂದರು.
ಈ ಸಂದರ್ಭ ಮಾತನಾಡಿದ ಸದಸ್ಯರು, ನಿರ್ಮಿತಿ ಕೇಂದ್ರದಿAದ ಕಾಮಗಾರಿ ನಡೆದಿದ್ದೇ ಆದಲ್ಲಿ ವರ್ಷಗಳೇ ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತದೆ. ಹಾಗಾಗೀ ಮುಂದೆ ವೀರಾಜಪೇಟೆ ಪುರಸಭೆ ವತಿಯಿಂದ ನಡೆಸಲಾಗುವ ಯಾವುದೇ ಹೊಸ ಕಟ್ಟಡಗಳ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಗಳಿಗೆ ಒಪ್ಪಿಸದಂತೆ ಅಸಮಾಧಾನ ಹೊರ ಹಾಕಿದರು.
ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ವೀರಾಜಪೇಟೆಯಲ್ಲಿ ನೂತನವಾಗಿ ನಿರ್ಮಿಸ ಹೊರಟಿರುವ ಪುರಭವನ, ಪುರಸಭೆ ಕಟ್ಟಡ, ಮಾರುಕಟ್ಟೆ ಯಾವುದರ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸುವುದು ಬೇಡ. ಈಗಾಗಲೇ ವೀರಾಜಪೇಟೆಯಲ್ಲಿ ನಿರ್ಮಿತಿ ಕೇಂದ್ರದ ಮೂಲಕ
(ಮೊದಲ ಪುಟದಿಂದ) ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಮೀನು ಮಾರುಕಟ್ಟೆಯೇ ಸ್ಪಷ್ಟ ಉದಾಹರಣೆಯಾಗಿದೆ. ನಿಜವಾದ ನೀಲನಕ್ಷೆಯ ಪ್ರಕಾರ ಕೆಲಸ ನಡೆದಿಲ್ಲ. ಮಳೆ ಬಂದರೆ ಕಟ್ಟಡದೊಳಗೆ ಮಳೆ ನೀರು ಸಂಪೂರ್ಣ ತುಂಬಿಹೋಗುತ್ತದೆ. ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಬಿಡುವ ವ್ಯವಸ್ಥೆ ಮಾಡಿಲ್ಲ. ಮತ್ತೆ ನಿರ್ಮಿತಿ ಕೇಂದ್ರಕ್ಕೆ ಪುರಸಭೆಯು ಮುಂಬರುವ ಕಾಮಗಾರಿಗಳನ್ನು ಒಪ್ಪಿಸಿದರೆ ದಶಕಗಳು ಕಳೆದರೂ ಕಟ್ಟಡ ನಿರ್ಮಾಣ ಆಗುವುದಿಲ್ಲ ಎಂದು ನಿರ್ಮಿತಿ ಕೇಂದ್ರದ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿ, ನಗರಕ್ಕೆ ಉತ್ತಮವಾದ ಪುರಭವನ ನಿರ್ಮಾಣ ಮಾಡಿ, ಅದರಲ್ಲಿ ಹೈಟೆಕ್ ಆಗಿರುವ ರಂಗಮAದಿರವನ್ನು ನಿರ್ಮಿಸಿ, ಪುರಸಭಾ ಸದಸ್ಯರಿಗೆ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಲು ಕೊಠಡಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡುವ ಜಾಗದಲ್ಲಿ ಒಂದು ಮಿನಿ ಥಿಯೇಟರ್ ನಿರ್ಮಾಣ ಮಾಡಿದರೆ ಪುರಸಭೆಗೆ ಆದಾಯವು ಬರುತ್ತದೆ. ಜನರಿಗೆ ಮನರಂಜನೆಯೂ ದೊರಕುತ್ತದೆ ಎಂದರು.
ಸದಸ್ಯ ಎಸ್. ಎಚ್ ಮತೀನ್ ಪುರಸಭಾ ಕಟ್ಟಡ ಮಾಡುವಾಗ ಅದರಲ್ಲಿ ವಾಣಿಜ್ಯ ಕಟ್ಟಡಗಳು ಬೇಡ, ಮುಂದಿನ ಐವತ್ತು ವರ್ಷಗಳನ್ನು ನೆನಪಿನಲ್ಲಿಟ್ಟುಕೊಂಡು ಕಟ್ಟಡ ನಿರ್ಮಾಣ ನಡೆಯಲಿ. ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಜವಾಬ್ದಾರಿ ವಹಿಸುವುದು ಬೇಡ ಎಂದರು. ಸಿ.ಕೆ. ಪೃಥ್ವಿನಾಥ್ ಮಾತನಾಡಿ ನಿರ್ಮಿತಿ ಕೇಂದ್ರದ ಮೇಲೆ ಕಳಪೆ ಕಾಮಗಾರಿಯ ಆರೋಪಗಳು ಜಿಲ್ಲೆಯಾದ್ಯಂತ ಬಂದಿರುವುದನ್ನು ನೋಡುತ್ತಿದ್ದೇವೆ. ಇಷ್ಟು ದೊಡ್ಡ ಯೋಜನೆಯನ್ನು ನಿರ್ಮಿತಿ ಕೇಂದ್ರಕ್ಕೆ ಕೊಡುವುದು ಸೂಕ್ತವಲ್ಲ ಎಂದರು. ಪುರಸಭಾ ಸದಸ್ಯರುಗಳಾದ ರಜಿನಿಕಾಂತ್, ಜಲೀಲ್, ಅಗಸ್ಟಿನ್ ಬೆನ್ನಿ ಜೂನಾ, ಅನಿತಾ, ದೇಚಮ್ಮ, ಅವರುಗಳು ಕೂಡಾ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸದಂತೆ ಸಲಹೆ ನೀಡಿದರು.
ಈ ಸಂದರ್ಭ ಸಭೆಯಲ್ಲಿ ಹಾಜರಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿ ಶಶಾಂಕ್ ಮಾತನಾಡಿ, ಸರ್ಕಾರದಿಂದ ಯಾವ ಇಲಾಖೆಗೆ ಎಷ್ಟು ಅನುದಾನ ಬರುತ್ತದೆ ಅದರಂತೆ ಕಾಮಗಾರಿ ನಡೆಸಿದ್ದೇವೆ. ಎಲ್ಲದ್ದಕ್ಕೂ ದಾಖಲಾತಿಗಳಿವೆ ಎಂದು ಸಮಜಾಯಿಷಿಕೆ ನೀಡುವ ಯತ್ನ ಮಾಡಿದರು. ಸದಸ್ಯರು ಮಧ್ಯಪ್ರವೇಶಿಸಿ ದಾಖಲಾತಿ ನೀಡಿ ಎನ್ನುವ ಸವಾಲು ಹಾಕಿದರು. ಸಭೆಯಲ್ಲಿ ಪುರಸಭೆ ಸರ್ವ ಸದಸ್ಯರು, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.