‘ಇದು ಚಂದಿರನ ಮೇಲೆ ಮಾನವನ ಒಂದು ಪುಟ್ಟ ಹೆಜ್ಜೆ. ಆದರಿದು, ಮನುಕುಲದ ದೈತ್ಯ ಹೆಜ್ಜೆಯೇ ಸರಿ!’

೧೯೬೯ ರ ಜುಲೈ ೨೦ ರಂದು ಚಂದಿರನ ಮೇಲೆ ಮೊದಲ ಹೆಜ್ಜೆಯಿರಿಸಿದ ಅಮೇರಿಕಾದ ಗಗನಯಾತ್ರಿ ನೀಲ್ ಆಲ್ಡೆನ್ ಆರ್ಮ್ಸ್ಟಾçಂಗ್ ಉದ್ಗರಿಸಿದ್ದು ಹೀಗೆ! ಅಮೇರಿಕಾದ ಅಪೋಲೋ-೧೧ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಯಿಂದ ೩ ಲಕ್ಷ ೮೫ ಸಾವಿರ ಕಿ.ಮೀ. ದೂರ ಚಂದಿರನೆಡೆಗೆ ಪಯಣಿಸಿದ ಆರ್ಮ್ಸ್ಟಾçಂಗ್ ಈ ಸಾಧನೆ ಮೆರೆದರು.

ಚಂದ್ರನ ಮೇಲೆ ಹೆಜ್ಜೆ ಇರಿಸಿದವರಲ್ಲಿ ಆರ್ಮ್ಸ್ಟಾçಂಗ್ ಮೊದಲಿಗರು. ಎಡ್ವಿನ್ ಆಲ್ಡಿçÃನ್, ಚಾರ್ಲ್ಸ್ಪೀಟ್ ಕೊನ್ರಾಡ್, ಅಲೆನ್ ಬೀನ್, ಅಲೆನ್ ಶೆಫರ್ಡ್ ಜೂನಿಯರ್, ಎಡ್ಗರ್ ಮಿಚೆಲ್, ಡೇವಿಡ್ ಸ್ಕಾಟ್, ಜೇಮ್ಸ್ ಇರ್ವಿನ್, ಜಾನ್ ಯಂಗ್, ಚಾರ್ಲ್ಸ್ ಡ್ಯೂಕ್,ಯೂನಿನ್ ಸೆರ್ನಾನ್ ಮತ್ತು ಹ್ಯಾರಿಸ್ ಸ್ಕಿö್ಮಟ್ ಇದುವರೆಗೆ ಚಂದ್ರನ ಮೇಲೆ ಹೆಜ್ಜೆ ಇರಿಸಿದ ೧೨ ಗಗನ ಯಾತ್ರಿಗಳು.

೧೯೫೯ ರಲ್ಲಿ ಸೋವಿಯತ್ ರಷ್ಯಾದ ಲೂನಾ-೧ ಬಾಹ್ಯಾಕಾಶ ನೌಕೆ ಚಂದ್ರನಿAದ ಕೇವಲ ೫,೯೯೫ ಕಿ.ಮೀ. ದೂರದ ಕಕ್ಷೆ ಪ್ರವೇಶಿಸಿದ ಮೊದಲ ಗಗನ ನೌಕೆ ಎಂಬ ಗರಿಮೆಗೆ ಪಾತ್ರವಾಯಿತು. ವಿಶ್ವದ ಮೊದಲ ಅಂತರಿಕ್ಷ ಯಾನ ಮಾಡಿದ ಮಾನವ ಎಂಬ ಕೀರ್ತಿಗೆ ಪಾತ್ರರಾಗಿದ್ದು ರಷ್ಯಾದ ಗಗನಯಾನಿ ಯೂರಿ ಅಲೆಕ್ಸಿವಿಚ್ ಗಗಾರಿನ್. ಅವರು ೧೯೬೧ ರ ಏಪ್ರಿಲ್ ೧೨ ರಂದು ರಷ್ಯಾದ ವೊಸ್ಟೋಕ್-೧ ಗಗನ ನೌಕೆ ಮೂಲಕ ಅಂತರಿಕ್ಷದಲ್ಲಿ ೧ ಗಂಟೆ ೪೮ ನಿಮಿಷ ಭೂಮಿಯ ಒಂದು ಸುತ್ತು ಪ್ರದಕ್ಷಿಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು.

ಆರ್ಮ್ಸ್ಟಾçಂಗ್ ಚಂದಿರನ ಮೇಲೆ ಮೊದಲ ಬಾರಿಗೆ ಹೆಜ್ಜೆಯಿರಿಸಿದ ದಿನ ಜುಲೈ ೨೦ ಅಂರ‍್ರಾಷ್ಟಿçÃಯ ಚಂದಿರನ ದಿನವಾಗಿ ಆಚರಿಸಲಾಗುತ್ತಿದೆ. ವಿಮೆನ್ನಾದಲ್ಲಿನ ‘ದಿ ಮೂನ್ ವಿಲೇನ್ ಅಸೋಸಿಯೇಷನ್’ ಮಾಡಿದ ಪ್ರಸ್ತಾವನೆಗೆ ಅನುಗುಣವಾಗಿ ಅಂರ‍್ರಾಷ್ಟಿçÃಯ ಚಂದಿರನ ದಿನ ಆಚರಣೆಗೆ ಸಂಬAಧಿಸಿದ ನಿರ್ಣಯವನ್ನು ೨೦೨೧ ರ ಡಿಸೆಂಬರ್‌ನಲ್ಲಿ ಅಂಗೀಕರಿಸಲಾಗಿದೆ.

‘ಮಾನವೀಯತೆಗಾಗಿ ಚಂದಿರನೆಡೆಗೆ ಹೊಸ ಪಯಣದ ಆರಂಭ’ ಎಂಬುದು, ಈ ಬಾರಿ ಚಂದಿರನ ದಿನಾಚರಣೆಯ ಧ್ಯೇಯ ವಾಕ್ಯ. ಇದಕ್ಕೆ ಅನುಗುಣವಾಗಿಯೋ ಎಂಬAತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ ಜುಲೈ ೧೪ ರಂದು ತನ್ನ ಮಹತ್ವಾಕಾಂಕ್ಷೆಯ ‘ಚಂದ್ರಯಾನ-೩’ ಗಗನ ನೌಕೆಯ ಉಡ್ಡಯನವನ್ನು ಯಶಸ್ವಿಯಾಗಿ ಮಾಡಿದೆ.

ಈ ಯೋಜನೆ ಯಶಸ್ವಿಯಾದರೆ, ಅಮೇರಿಕಾ, ರಷ್ಯಾ ಹಾಗೂ ಚೀನಾದ ನಂತರ ಚಂದ್ರನ ಮೇಲೆ ಇಳಿದ ವಿಶ್ವದ ನಾಲ್ಕನೆ ರಾಷ್ಟç ಎಂಬ ಖ್ಯಾತಿಗೆ ಭಾರತ ಪಾತ್ರವಾಗಲಿದೆ. ಅಮೇರಿಕಾದ ಆರ್ಟೆಮಿಸ್, ರಷ್ಯಾದ ಲೂನಾ ೨೫ ಮತ್ತು ಚೀನಾದ ಚಾಂಗ್ ಇ ಪ್ರಾಜೆಕ್ಟ್ ಬಾಹ್ಯಾಕಾಶ ನೌಕೆಗಳೂ ಚಂದ್ರನೆಡೆಗೆ ಪಯಣಿಸಲು ಸಜ್ಜುಗೊಳ್ಳುತ್ತಿವೆ.

೨೦೦೮ ರ ಅಕ್ಟೋಬರ್ ೨೨ ರಂದು ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಭಾರಿ ಮಳೆಯ ನಡುವೆಯೇ ‘ಪಿ.ಎಸ್.ಎಲ್.ಸಿ. ರಾಕೆಟ್’ ಮೂಲಕ ಇಸ್ರೋ, ‘ಚಂದ್ರಯಾನ-೧’ ಗಗನ ನೌಕೆಯ ಯಶಸ್ವಿ ಉಡ್ಡಯನ ನಡೆಸಿತ್ತು. ಚಂದ್ರನ ಮೇಲೆ ಅತ್ಯಲ್ಪ ಪ್ರಮಾಣದಲ್ಲಿ ನೀರು ಇರವುದನ್ನು ಖಚಿತಪಡಿಸುವಲ್ಲಿ ಈ ಯೋಜನೆ ಯಶಸ್ವಿಯಾಗಿತ್ತು. ಚಂದ್ರನನ್ನು ಭೌತಿಕವಾಗಿ ಸ್ಪರ್ಶಿಸದೆ ೯ ತಿಂಗಳು ಕಕ್ಷೆಯಲ್ಲಿ ಸುತ್ತಿ ಪಡೆದ ಮಹತ್ವದ ಮಾಹಿತಿ ಇದಾಗಿತ್ತು.

೨೦೧೯ ರ ಜುಲೈ ೨೨ ರಂದು ‘ಚಂದ್ರಯಾನ-೨’ ಬಾಹ್ಯಾಕಾಶ ನೌಕೆಯ ಯಶಸ್ವಿ ಉಡ್ಡಯನ ‘ಜಿ.ಎಸ್.ಎಲ್.ವಿ. ಮಾರ್ಕ್ ೩’ ರಾಕೆಟ್ ಮೂಲಕ ನಡೆದಿತ್ತು. ಚಂದಿರನ ಕಕ್ಷೆಯಲ್ಲಿ ಸುತ್ತಿದ ನಂತರ ಇದರಲ್ಲಿ ಅಳವಡಿಸಿದ್ದ ‘ವಿಕ್ರಂ ಲ್ಯಾಂಡರ್’ ಆ ವರ್ಷದ ಸೆಪ್ಟೆಂಬರ್ ೬ ರಂದು ಕಕ್ಷಾ ಕೋಶದಿಂದ ಬೇರ್ಪಟ್ಟಿತ್ತು.

ನಂತರ ಅದು ಚಂದಿರನ ಮೇಲ್ಮೆöÊಯತ್ತ ಧಾವಿಸಲಾರಂಭಿಸಿತ್ತು. ಆದರೆ ಚಂದ್ರನಿAದ ಕೇವಲ ಒಂದೂವರೆ ಕಿ.ಮೀ. ಎತ್ತರದಲ್ಲಿದ್ದಾಗ ಅದು ಸಂಪರ್ಕ ಕಡಿದುಕೊಂಡಿತ್ತು. ನಿಧಾನಕ್ಕೆ ಇಳಿಯುವ ಬದಲು ವಿಕ್ರಂ ಲ್ಯಾಂಡರ್ ಚಂದಿರನ ಮೇಲೆ ಅಪ್ಪಳಿಸಿದ್ದು ಈ ಯೋಜನೆಯನ್ನು ಸ್ವಲ್ಪಮಟ್ಟಿಗೆ ವಿಫಲವಾಗಿಸಿತ್ತು.

ಆದರೆ ಚಂದ್ರಯಾನ ೨ ರ ರೋವರ್ ಕಕ್ಷಾಕೋಶ ನಿರಂತರವಾಗಿ ಚಂದ್ರನನ್ನು ಸುತ್ತುತ್ತಿದ್ದು, ಅದರಲ್ಲಿ ಅಳವಡಿಕೆಯಾಗಿರುವ ಸ್ವದೇಶಿ ವೈಜ್ಞಾನಿಕ ಉಪಕರಣಗಳು ಮಹತ್ವದ ಚಿತ್ರಗಳು ಮತ್ತು ಮಾಹಿತಿಗಳನ್ನು ರವಾನಿಸುವ ಕಾಯಕವನ್ನು ಮುಂದುವರಿಸಿದೆ. ಈ ಎರಡು ಯೋಜನೆಗಳ ಮೂಲಕ ಚಂದಿರನಲ್ಲಿನ ಕುಳೀಗಳ ಚಿತ್ರ, ಚಂದಿರನ ಮೇಲ್ಮೆöÊಯಲ್ಲಿನ ಮಂಜುಗಡ್ಡೆಯ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಚಂದ್ರಯಾನ-೨ ರಲ್ಲಿನ ಸ್ವಲ್ಪಮಟ್ಟಿಗಿನ ಹಿನ್ನಡೆಯಿಂದ ಕಂಗೆಡದ ಇಸ್ರೋ ವಿಜ್ಞಾನಿಗಳು ಈ ಬಾರಿ ಲ್ಯಾಂಡರ್‌ನ ‘ಸಾಫ್ಟ್ ಲ್ಯಾಂಡಿAಗ್’ ಬಗ್ಗೆ ಗಮನ ಇರಿಸಿದ್ದಾರೆ. ಲ್ಯಾಂಡರ್‌ಗೆ ಯಾವುದೇ ರೀತಿಯ ಹಾನಿ ಆಗದಂತೆ ನಿಧಾನ ಗತಿಯಲ್ಲಿ ಅದನ್ನು ಚಂದಿರನ ಮೇಲೆ ಇಳಿಸಲು ಗಮನ ಕೇಂದ್ರೀಕರಿಸಿದ್ದಾರೆ. ಎಲ್ಲವೂ ಪೂರ್ವ ನಿಯೋಜಿತ ಯೋಜನೆಗೆ ಅನುಗುಣವಾಗಿ ನಡೆದರೆ, ಇದೇ ಆಗಸ್ಟ್ ೨೩ ರಿಂದ ೨೫ ರೊಳಗೆ ಲ್ಯಾಂಡರ್, ಚಂದ್ರನ ಮೇಲಿಳಿಯಲಿದೆ.

ಈ ಯೋಜನೆಯ ಯಶಸ್ಸಿನೊಂದಿಗೆ, ಭೂಮಿಯ ವಾತಾವರಣದಲ್ಲಿ ಬೆಳಕಿನ ಧ್ರುವೀಕರಣ, ಚಂದಿರನ ಅಂಗಳದಲ್ಲಿನ ರಾಸಾಯನಿಕ, ಖನಿಜ ಲವಣ, ನೀರಿನ ಲಭ್ಯತೆ ಮೊದಲಾದ ಅಂಶಗಳ ಕುರಿತು ಮತ್ತಷ್ಟು ಪೂರಕ ಮಾಹಿತಿಗಳು ಲಭಿಸುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಚಂದಿರನಲ್ಲಿ ಮಾನವ ನೆಲೆ ಕಂಡುಕೊಳ್ಳಲು ಸಾಧ್ಯವೆ? ಮಂಗಳ ನಂತಹ ಇತರ ಗ್ರಹಗಳಿಗೆ ಪ್ರಯಾಣಿಸಲು ಚಂದಿರನನ್ನು ‘ಲಾಂಚ್ ಪ್ಯಾಡ್’ ಆಗಿ ಬಳಸಿಕೊಳ್ಳಬಹುದೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸೂಕ್ತ ಅಧ್ಯಯನಕ್ಕೆ, ‘ಚಂದ್ರಯಾನ-೩’ ನೆರವಾಗುವ ನಿರೀಕ್ಷೆ ಇದೆ.

ಉಪಗ್ರಹಗಳು ಮತ್ತು ಗಗನಯಾನ ನೌಕೆಗಳ ಉಡ್ಡಯನಕ್ಕೆ ‘ಕ್ರಯೋಜೆನಿಕ್ ಇಂಜಿನ್’ಗಾಗಿ ಭಾರತದ ಬೇಡಿಕೆಗೆ ಅಮೇರಿಕಾ, ರಷ್ಯಾ ಸಕಾರಾತ್ಮಕವಾಗಿ ಸ್ಪಂದಿಸದಿದ್ದಾಗ, ಅವುಗಳನ್ನು ದೇಶೀಯವಾಗಿಯೇ ಅಭಿವೃದ್ಧಿ ಪಡಿಸಿದ ಹೆಗ್ಗಳಿಕೆ ಭಾರತದ್ದು! ಇಂದು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ಅಮೇರಿಕಾದ ‘ನಾಸಾ’ ಸೇರಿದಂತೆ ವಿಶ್ವದ ಚಿತ್ತವೇ ನೆಟ್ಟಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಅಮೇರಿಕಾವೂ ಮುಕ್ತ ಕಂಠದಿAದ ಪ್ರಶಂಸಿಸುತ್ತಿದೆ. ೧೯೬೩ ರಲ್ಲಿ ಮೊದಲ ರಾಕೆಟ್ ಉಡ್ಡಯನ ಮಾಡಿದಾಗ ಭಾರತ ಬಡರಾಷ್ಟçವಾಗಿತ್ತು. ಚಿಕ್ಕದಾದ ಗಗನ ನೌಕೆಯನ್ನು ಸೈಕಲ್ ಮೇಲೆಯೇ ಉಡ್ಡಯನ ಕೇಂದ್ರಕ್ಕೆ ಒಯ್ದು, ಭೂಮಿಯಿಂದ ೧೨೪ ಮೈಲು ದೂರದ ಕಕ್ಷೆಯಲ್ಲಿ ಅದನ್ನು ಸೇರಿಸಲಾಗಿತ್ತು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೇರಿಕಾ ಹಾಗೂ ರಷ್ಯಾಗೆ ಸರಿಸಮನಾಗಿ ಹೆಜ್ಜೆ ಹಾಕಲು ಆಗ ಹೆಣಗುತ್ತಿದ್ದ ಭಾರತ ಈಗ ತನ್ನ ಛಾಪು ಮೂಡಿಸಿದೆ ಎಂದು ಅಮೇರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬರೆಯಲಾಗಿದೆ. ಇಸ್ರೋ ಸಾಧನೆಗೆ ಉಘೇ ಎನ್ನೋಣ. ಚಂದಿರನ ವಿದ್ಯಮಾನಗಳ ಅನ್ವೇಷಣೆಯಲ್ಲಿ ಇಸ್ರೋ ಯಶಸ್ವಿಯಾಗಲಿ ಎಂಬುದೇ ಭಾರತೀಯರೆಲ್ಲರ ತೆರೆದ ಮನದ ಹಾರೈಕೆ.

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.