ಕುಶಾಲನಗರ, ಜು.೧೯: ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕ್ಷೀಣಗೊಂಡ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಹರಿವು ಪ್ರಮಾಣ ಬಹುತೇಕ ಇಳಿಕೆಗೊಂಡಿದೆ. ಕಳೆದ ವಾರ ವ್ಯಾಪಕ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ನದಿಯಲ್ಲಿ ಸುಮಾರು ೫ ಮೀಟರ್ ಎತ್ತರಕ್ಕೆ ನೀರಿನ ಹರಿವು ಕಂಡುಬAದಿತ್ತು.
ಕುಶಾಲನಗರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಬಿಸಿಲಿನ ವಾತಾವರಣ ಗೋಚರಿಸಿದೆ. ಹಾರಂಗಿ ಜಲಾಶಯದಲ್ಲಿ ಪ್ರಸಕ್ತ ೪೩೮೩ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರಿನ ಒಳಹರಿವು ಇದ್ದು ಬುಧವಾರ ಸಂಜೆ ವೇಳೆಗೆ ೨೮೪೮ ಅಡಿಗಳಷ್ಟು ನೀರಿನ ಮಟ್ಟ ಕಂಡು ಬಂದಿದೆ. ೨೮೫೯ ಅಡಿಗಳ ಗರಿಷ್ಠ ಸಂಗ್ರಹ ಮಟ್ಟದ ಜಲಾಶಯದಲ್ಲಿ ಭರ್ತಿಯಾಗಲು ಇನ್ನು ೧೧ ಅಡಿಗಳಷ್ಟು ನೀರು ಬರಬೇಕಾಗಿದೆ. ೮.೫ ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸಕ್ತ ೫.೩೪ ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಇದೆ.
ಕಳೆದ ಬಾರಿ ಜುಲೈ ಪ್ರಥಮ ವಾರದಲ್ಲಿ ಅಣೆಕಟ್ಟು ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಈ ಸಾಲಿನಲ್ಲಿ ಜಲಾಶಯಕ್ಕೆ ಇದುವರೆಗೆ ಒಟ್ಟು ೩.೧೩ ಟಿಎಂಸಿ ನೀರಿನ ಒಳಹರಿವು ಕಾಣಬಹುದು