ಮಡಿಕೇರಿ, ಜು. ೧೯: ನಗರದ ೧೯ನೇ ಕರ್ನಾಟಕ ಬೆಟಾಲಿಯನ್ ಕಚೇರಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಎನ್.ಸಿ.ಸಿ ಅಸೋಸಿಯೇಟ್ ಆಫೀಸರ್ ಲೆಫ್ಟಿನೆಂಟ್ ಲೇಪಾಕ್ಷಿ ಐ.ಡಿ ಹಾಗೂ ಸೀನಿಯರ್ ಅಂಡರ್ ಆಫೀಸರ್ ಪ್ರಜ್ವಲ್ ಅಯ್ಯಪ್ಪ ಅವರಿಗೆ ಎನ್.ಸಿ.ಸಿ.ಯಲ್ಲಿ ಉತ್ತಮ ಸಾಧನೆ ಹಾಗೂ ಸಮರ್ಪಕ ಕರ್ತವ್ಯಕ್ಕಾಗಿ ಮುಖ್ಯಮಂತ್ರಿ ಪ್ರಶಂಶನಾ ಪತ್ರವನ್ನು ನೀಡಲಾಯಿತು. ಇವರೊಂದಿಗೆ ಪುತ್ತೂರು ಸೆಂಟ್ ಫಿಲೋಮಿನಾ ಕಾಲೇಜಿನ ಕಿರಣ್, ವಿವೇಕಾನಂದ ಕಾಲೇಜಿನ ಹೇಮಾಸ್ವಾತಿ, ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಅಭಿಷೇಕ್ ಅವರಿಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಎನ್.ಸಿ.ಸಿ. ಕಮಾಂಡಿAಗ್ ಆಫೀಸರ್ ಕರ್ನಲ್ ಝೆಫರಿನ್ ಗಿಲ್ಬರ್ಟ್ ಅರ್ಹಾನ ಪ್ರಶಸ್ತಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ ೧೯ ಕರ್ನಾಟಕ ಬೆಟಾಲಿಯನ್ ಅಸಿಸ್ಟೆಂಟ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಚಾಕೋ ಸೇರಿದಂತೆ ಇನ್ನಿತರರು ಹಾಜರಿದ್ದರು.