ಕೂಡಿಗೆ, ಜು. ೧೯: ಶಿಕ್ಷಣ ಸಂಸ್ಥೆಗಳ ಏಳಿಗೆಯಲ್ಲಿ ಪೋಷಕ- ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳ ಪ್ರಗತಿಗೆ ಪೂರಕ ವಾಗಲು ಶಿಕ್ಷಣ ಸಂಸ್ಥೆಗಳೊAದಿಗೆ ಪೋಷಕರು ಭಾವನಾತ್ಮಕ ಸಂಬAಧ ಬೆಳೆಸಬೇಕು, ಇದರ ಮೂಲಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದಂತೆ ಆಗುವುದು ಎಂದು ಕೂಡಿಗೆಯ ಉದ್ಯಮಿ ಕಿಶೋರ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ ದರು. ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳ ಪ್ರಗತಿಗೆ ದಾನಿಗಳ ಸಹಕಾರ ಮುಖ್ಯವಾಗಿರುತ್ತದೆ. ಅವರುಗಳ ಮುಖೇನ ವಿದ್ಯಾರ್ಥಿ ಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗುವುದು ಎಂದರು. ಈ ಸಂದರ್ಭ ಕಿಶೋರ್ ಕುಮಾರ್ ಅವರು ೨೫ಕ್ಕೂ ಹೆಚ್ಚು ರಾಷ್ಟç ನಾಯಕರ ಭಾವ ಚಿತ್ರಗಳನ್ನು ಮತ್ತು ಶಾಲೆ ಅಭಿವೃದ್ಧಿಗೆ ಪೂರಕವಾದ ಸಹಕಾರವನ್ನು ಕೊಡುಗೆಯ ರೂಪದಲ್ಲಿ ನೀಡಿದರು. ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಎಂದರು. ಈ ಸಂದರ್ಭ ಕಿಶೋರ್ ಕುಮಾರ್ ಅವರು ೨೫ಕ್ಕೂ ಹೆಚ್ಚು ರಾಷ್ಟç ನಾಯಕರ ಭಾವ ಚಿತ್ರಗಳನ್ನು ಮತ್ತು ಶಾಲೆ ಅಭಿವೃದ್ಧಿಗೆ ಪೂರಕವಾದ ಸಹಕಾರವನ್ನು ಕೊಡುಗೆಯ ರೂಪದಲ್ಲಿ ನೀಡಿದರು. ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನುಸುಯಾ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೇಗೌಡ, ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಣ್ಣಕ್ಕ, ಸಿ ಆರ್ ಪಿ ಶಾಂತಕುಮಾರ್, ಸಹ ಶಿಕ್ಷಕರಾದ ವಿಜಯಲಕ್ಷಿö್ಮ, ಕಮಲ, ದೀಪಿಕಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಕಮಲ ನೆರವೇರಿಸಿ, ಸಣ್ಣಕ್ಕ ಸ್ವಾಗತಿಸಿ, ದೀಪಿಕಾ ವಂದಿಸಿದರು.