ಸಂಪಾಜೆ, ಜು. ೧೯: ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಸಂಪಾಜೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಸಮಾರಂಭ ನಡೆಯಿತು. ಲಯನ್ಸ್ ಜಿಲ್ಲಾ ೨ನೇ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಯೋಗೇಶ್ವರ ಎಸ್., ಧನಲಕ್ಷಿ÷್ಮÃ ನವೀನ್ ಹಾಗೂ ಕೋಶಾಧಿಕಾರಿ ಇಂದಿರಾ ದೇವಿಪ್ರಸಾದ್ ಮತ್ತು ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಳಿನಿ ಕಿಶೋರ್ ಅವರು ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ತನ್ನ ಅವಧಿಯಲ್ಲಿ ಸಹಕರಿಸಿದ ಕ್ಲಬ್ಬಿನ ಎಲ್ಲಾ ಸದಸ್ಯರಿಗೆ ಕಿರುಕಾಣಿಕೆಯನ್ನು ನೀಡಿ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎರಡನೇ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಅವರು ೨೨-೨೩ನೇ ಸಾಲಿನ ಜಿಲ್ಲಾಮಟ್ಟದಲ್ಲಿ ೪ನೇ ಸ್ಥಾನಗಳಿಸಿದÀ ಸಂಪಾಜೆ ಕ್ಲಬ್‌ಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ವಿತರಿಸಿದರು. ಚಾರ್ಟ್ರ್ ಸದಸ್ಯರಿಗೆ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಿಗೆ ಗೌರವಿಸಲಾಯಿತು. ಆಗಮಿಸಿದ್ದ ಪ್ರಾಂತ್ಯದ ಎಲ್ಲಾ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಪಾಜೆ ದೇವಿಪ್ರಸಾದ್ ಅವರ ಕುಟುಂಬದವರು ದಾನವಾಗಿ ನೀಡಿದ ೦.೨೮ ಸೆಂಟ್ಸ್ ನಿವೇಶನದಲ್ಲಿ ಲಯನ್ಸ್ ಸೇವಾ ಭವನ ನಿರ್ಮಾಣಕ್ಕೆ ಸಂಪಾಜೆ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷ ಯೋಗೇಶ್ವರ್ ಅವರಿಂದ ೧ ಲಕ್ಷ ರೂಪಾಯಿ ದೇಣಿಗೆಯನ್ನು ಸಂಪಾಜೆ ಲಯನ್ಸ್ ಟ್ರಸ್ಟ್ಗೆ ನೀಡಲಾಯಿತು.

ಇತರ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು, ಸಂಪಾಜೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಟೀನಾ ಚರಣ್ ನಿರೂಪಿಸಿದರು. ಧನಲಕ್ಷಿ÷್ಮÃ ವಂದಿಸಿದರು.