ಕುಶಾಲನಗರ, ಜು. ೧೮: ಕುಶಾಲನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ವಿ.ಎಸ್. ಸುಮನ್ ಬಾಲಚಂದ್ರ ಅವರು ಆಯ್ಕೆಯಾಗಿದ್ದಾರೆ.

ಕುಶಾಲನಗರ ಎಪಿಸಿಎಂ ಎಸ್ ಬೆಳ್ಳಿ ಮಹೋತ್ಸವ ಸಭಾಂಗಣದಲ್ಲಿ ತಾ. ೧೯ ರಂದು (ಇಂದು) ನಡೆಯಲಿರುವ ಸಮಾರಂಭದಲ್ಲಿ ಲಯನ್ಸ್ ಮಾಜಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಅವರು ನೂತನ ತಂಡಕ್ಕೆ ಪದಗ್ರಹಣ ನಡೆಸಿಕೊಡಲಿದ್ದಾರೆ. ನೂತನ ಸಾಲಿನ ಕಾರ್ಯದರ್ಶಿಯಾಗಿ ಟಿ.ಕೆ. ರಾಜಶೇಖರ್, ಖಜಾಂಚಿಯಾಗಿ ನಿತಿನ್ ಎನ್ ಗುಪ್ತ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭ ಲಯನ್ಸ್ ಮಾಜಿ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ ಅವರು ಕುಶಾಲನಗರ ಕೆಎಂಟಿ ಶಾಲಾ ಆವರಣದಲ್ಲಿ ನಿರ್ಮಾಣಗೊಂಡಿರುವ ಡಯಾಲಿಸಿಸ್ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ.