ಶನಿವಾರಸಂತೆ, ಜು. ೧೮: ಸಮೀಪದ ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ವರ್ಷದಿಂದ ನೆಲೆಸಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಅನಾಥಾಶ್ರಮಕ್ಕೆ ದಾಖಲಿಸಿ ಕರವೇ ಮಾನವೀಯತೆ ಮೆರೆೆದಿದೆ.
ಅಸ್ವಸ್ಥ ಮಹಿಳೆಯಿಂದ ಕಿರಿಕಿರಿ ಅನುಭವಿಸಿದ್ದ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಅವರು ದೂರವಾಣಿ ಮೂಲಕ ಸಮಾಜ ಸೇವಕ ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರನ್ನು ಸಂಪರ್ಕಿಸಿ, ಅಸ್ವಸ್ಥ ಅನಾಥ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಅನಾಥಾಶ್ರಮಕ್ಕೆ ದಾಖಲಿಸುವಂತೆ ವಿನಂತಿಸಿಕೊAಡರು.
ಸ್ಪAದಿಸಿದ ಫ್ರಾನ್ಸಿಸ್ ಡಿಸೋಜ ಅವರು ಕೊಡ್ಲಿಪೇಟೆಗೆ ಧಾವಿಸಿ, ಪಂಚಾಯಿತಿ ಸದಸ್ಯರು ಹಾಗೂ ಪಿಡಿಒ ಸಮ್ಮುಖದಲ್ಲಿ ಬಸ್ ನಿಲ್ದಾಣದಲ್ಲಿದ್ದ ಅಸ್ವಸ್ಥ ಮಹಿಳೆಯ ಮನವೊಲಿಸಲು ಯತ್ನಿಸಿದರು. ಜಗ್ಗದ ಮಹಿಳೆ ಫ್ರಾನ್ಸಿಸ್ ಮೇಲೆ ಹಲ್ಲೆ ಮಾಡಿದರೂ ಆಕೆಯನ್ನು ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಿದ ವಾಹನದಲ್ಲಿ ಸ್ವತಃ ತಾವೇ ಕರೆದೊಯ್ದು ಬೆಂಗಳೂರಿನ ಆಟೋ ರಾಜ ಅನಾಥಾಶ್ರಮಕ್ಕೆ ದಾಖಲಿಸಿದರು.
ಫ್ರಾನ್ಸಿಸ್ ಡಿಸೋಜ ಮಾತನಾಡಿ, ಮಾನಸಿಕ ಅಸ್ವಸ್ಥರು ಎಲ್ಲಿಯೇ ಕಂಡು ಬಂದರೂ ತಮಗೆ ಮಾಹಿತಿ ನೀಡಿದಲ್ಲಿ ಅಂಥವರನ್ನು ಅನಾಥಾಶ್ರಮಕ್ಕೆ ಕರೆದೊಯ್ದು ದಾಖಲಿಸಲಾಗುವುದು. ಮೊ. ೯೬೮೬೦೯೫೮೩೧ ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ಲಾವಣ್ಯ, ಪ್ರಸನ್ನ, ನಂದೀಶ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್, ಪಾವನಾ, ಸಿಬ್ಬಂದಿ ದೀಪಕ್, ಕಾಂತರಾಜ್, ಆಶಾ ಕಾರ್ಯಕರ್ತೆ ತ್ರಿವೇಣಿ, ವಾಹನ ಚಾಲಕ ರಾಮು ಇದ್ದರು.