ಕುಶಾಲನಗರ, ಜು. ೧೮: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘ ಕುಶಾಲನಗರ ತಾಲೂಕು ಘಟಕದ ವತಿಯಿಂದ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಇ-ಸ್ಟಾಂಪಿAಗ್ ಕೇಂದ್ರವನ್ನು ವಿದ್ಯುತ್ ಗುತ್ತಿಗೆದಾರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಸಂತ್ ರೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಂಘದ ಬೆಳವಣಿಗೆಗೆ ಇ-ಸ್ಟಾಂಪಿAಗ್ ಕೇಂದ್ರ ಆರ್ಥಿಕ ವ್ಯವಸ್ಥೆ ಭದ್ರಗೊಳಿಸುತ್ತದೆ. ಜೊತೆಗೆ ಸಾರ್ವಜನಿಕರಿಗೆ ಹಾಗೂ ವಿದ್ಯುತ್ ಗ್ರಾಹಕರಿಗೆ ಕೇಂದ್ರದಿAದ ಅನುಕೂಲವಾಗಲಿದೆ ಎಂದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಕೆ. ಅನಿಲ್, ಕಾರ್ಯದರ್ಶಿ ಎಸ್.ರಾಜ, ಸಹ ಕಾರ್ಯದರ್ಶಿ ಎಂ.ಆರ್. ಸಂಜೀವ, ಖಜಾಂಚಿ ಬಿ.ಸಿ. ಸತೀಶ್, ತಾಲೂಕು ಘಟಕದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಸುಮೇಶ್, ಕಾರ್ಯದರ್ಶಿ ದಿಲೀಪ್ ಮತ್ತಿತರರಿದ್ದರು.
ಚಾಮುಂಡೇಶ್ವರಿಗೆ ವಿಶೇಷ ಪೂಜೆ : ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಆಷಾಡ ಮಾಸದ ಕೊನೆಯ ಶುಕ್ರವಾರ ಶ್ರೀ ಚಾಮುಂಡೇಶ್ವರಿ ದೇವಿಯ ವಿಶೇಷ ಪೂಜೆ ನೆರವೇರಿಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಿದ್ದರು.