ಕೂಡಿಗೆ, ಜು. ೧೮: ಕೂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಹೆಚ್.ಜೆ. ಮೇಘ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಸುಮಾ, ಸಮಿತಿಯ ಸದಸ್ಯರಾಗಿ ಬುಶ್ರಾ, ಸುಬೈದ, ಸಮೀನಾ, ಸುಧಾಮಣಿ, ಸಮೀನಾ, ಪೂಜಾ, ಸುಧಾ, ನಂದಿನಿ, ವನಿತ, ರಾಜಮ್ಮ, ಶೇಖರ್ ಶೆಟ್ಟಿ, ಶಿಲ್ಪ, ಕುಮಾರಿ ಆಯ್ಕೆಗೊಂಡರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಸಣ್ಣಕ್ಕ, ನಿಕಟಪೂರ್ವ ಅಧ್ಯಕ್ಷೆ ಅನುಸೂಯಾ, ಸಹ ಶಿಕ್ಷಕರಾದ ವಿಜಯಲಕ್ಷಿö್ಮ, ಕಮಲ, ದೀಪಿಕಾ, ಸಿ.ಆರ್.ಪಿ. ಶಾಂತಕುಮಾರ್ ಸೇರಿದಂತೆ ಪೋಷಕರು ಹಾಜರಿದ್ದರು.