ಕುಶಾಲನಗರ, ಜು. ೧೮: ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳು ಮತ್ತು ಗಾಂಜಾ ಮಾರಾಟ ದಂಧೆ ಕಾರ್ಯಾ ಚರಣೆ ಬೆನ್ನಲ್ಲೇ ಕೇರಳದ ಪಾಲ್ಘಾಟ್ನಲ್ಲಿ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ನಿವಾಸಿ ಅಂತರರಾಜ್ಯ ಡ್ರಗ್ ಪೆಡ್ಲರ್ ಓರ್ವನನ್ನು ಬಂಧಿಸಲಾಗಿದೆ.
ಕೊಪ್ಪ ಗ್ರಾಮದ ಬೆಟ್ಟದಪುರ ಸರ್ಕಲ್ ಸಮೀಪದ ಬಿರಿಯಾನಿ ಹೊಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೊಹಮ್ಮದ್ ಆಸಿಫ್ (೨೮) ಬಂದಿತ ಆರೋಪಿ. ಆರೋಪಿ ಯಿಂದ ೧೦೦ ಗ್ರಾಂ ಎಂ ಡಿ ಎಂ ಮಾದಕ ವಸ್ತುಗಳನ್ನು ಅಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಆರೋಪಿ ಆಸಿಫ್ ಮಾದಕ ದ್ರವ್ಯಗಳನ್ನು ಅಂತರರಾಷ್ಟಿçÃಯ ಮಟ್ಟದಿಂದ ತರಿಸಿಕೊಂಡು ಡ್ರಗ್ ಪೆಡ್ಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲವು ಸಮಯಗಳಿಂದ ಈತ ಬೆಂಗಳೂರು, ಕೇರಳದಲ್ಲಿ ಮಾದಕ ವಸ್ತು ಸರಬರಾಜು ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಈತನ ಹುಡುಕಾಟದಲ್ಲಿ ಕುಶಾಲನಗರದ ಪೊಲೀಸರು ಈ ಹಿಂದೆ ಕಾರ್ಯಾಚರಣೆ ನಡೆಸಿದ್ದರು. ಆದರೆ ಕೊಪ್ಪದಿಂದ ಪರಾರಿ ಆಗುವಲ್ಲಿ ಯಶಸ್ವಿಯಾಗಿದ್ದು, ಕೇರಳದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ. -ಚಂದ್ರ ಮೋಹನ್