ಸಿದ್ದಾಪುರ, ಜು. ೧೭ : ಗಾಂಜಾ ಸೇವನೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ.
ಸಿದ್ದಾಪುರ ಸಮೀಪದ ಕೆಸುವಿನಹಳ್ಳ ಬಸ್ ತಂಗುದಾಣದ ಬಳಿ ಆರು ಮಂದಿ ಗಾಂಜಾಸೇವನೆ ಮಾಡುತ್ತಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಆರೋಪಿಗಳನ್ನು, ಕಂಡಕರೆ ನಿವಾಸಿ ಇ.ಕೆ. ಉಸ್ಮಾನ್ (೫೩), ಕೆ.ಎಸ್. ಫರೀದ್ (೫೫), ಪಿ.ಎಂ. ಸಂಶುದ್ದೀನ್ (೪೪), ಚೆನ್ನಯ್ಯನಕೋಟೆ ನಿವಾಸಿಗಳಾದ ಇಬ್ರಾಹಿಂ (೨೭) ಹನೀಫ್ (೩೬), ಅಶ್ರಫ್ (೩೩) ಗುರುತಿಸಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.