ಸುಂಟಿಕೊಪ್ಪ, ಜು. ೧೭: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ರೂ.೫.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿತ್ತು. ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾದಾಪುರ ರಸ್ತೆಯ ಜಿಎಂಪಿ ಶಾಲೆಯ ಮೈದಾನದ ಸಮೀಪ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಅವರು ಶನಿವಾರ ಸಂಜೆ ಉದ್ಘಾಟಿಸಿದರು. ೫ ರೂ. ನಾಣ್ಯ ಹಾಕಿ ಶುದ್ದ ಕುಡಿಯುವ ನೀರನ್ನು ಪಡೆಯಲು ಕ್ಯಾನ್ ಸಹಿತ ಘಟಕಕ್ಕೆ ತೆರಳಿದ ಸಾರ್ವಜನಿಕರು ಶುದ್ಧ ಕುಡಿಯುವ ನೀರಿನ ಘಟಕವನ್ನು ಮುಚ್ಚಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ತರಾತುರಿಯಲ್ಲಿ ಉದ್ಘಾಟಿಸುವ ಅವಶ್ಯಕತೆ ಇತ್ತೆ? ಜನರು ಪ್ರಶ್ನಸುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸದೆ ಪ್ರಚಾರಕ್ಕಾಗಿ ಶಾಸಕರನ್ನು ಕರೆದು ಘಟಕವನ್ನು ಚಾಲನೆ ನೀಡಿದ್ದಾರೆ ಎಂದು ಆಟೋ ಸಂಘದ ಮಾಜಿ ಅಧ್ಯಕ್ಷ ಪ್ರಶಾಂತ್ ಆರೋಪಿಸಿದ್ದಾರೆ.