ಮಡಿಕೇರಿ, ಜು. ೧೭: ವೀರಾಜಪೇಟೆ ಅರಸುನಗರದ ನಿವಾಸಿ ಪಣಿಎರವರ ಕಾಳಿ (೨೪) ಅವರು ನಾಪತ್ತೆಯಾಗಿರುವುದಾಗಿ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅರಸುನಗರದ ದೇವಮ್ಮ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾಳಿ, ತಾ.೧೪ರಂದು ಮನೆಯಿಂದ ಹೊರಗಡೆ ಹೋಗಿದ್ದು, ಇನ್ನೂ ಹಿಂತಿರುಗಿಲ್ಲ ಎಂಬುದಾಗಿ ದೇವಮ್ಮ ಅವರು ದೂರು ನೀಡಿದ್ದಾರೆ. ಕಾಳಿ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ವೀರಾಜಪೇಟೆ ನಗರ ಠಾಣೆ ಫೋ. ೦೮೨೭೪-೨೫೭೩೩೩ ಅನ್ನು ಸಂಪರ್ಕಿಸುವAತೆ ಕೋರಿದೆ.