ನಾಪೋಕ್ಲು, ಜು. ೧೭: ಸಮೀಪದ ಮರಂದೋಡ ಗ್ರಾಮದಲ್ಲಿ ಮರವೊಂದು ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ಭೀತಿ ಸೃಷ್ಟಿಸಿತು. ಸೋಮವಾರ ಮುಂಜಾನೆ ನಾಲ್ಕು ಗಂಟೆಗೆ ಮರಂದೋಡ ಗ್ರಾಮದ ಕೆರೆತಟ್ ರಸ್ತೆಯ ಸಮೀಪ ನಾಪೋಕ್ಲು - ವೀರಾಜಪೇಟೆ ಮುಖ್ಯರಸ್ತೆಯ ೧೧ ಕೆ.ವಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ತಂತಿಗಳು ತುಂಡಾಗಿ ಸಮಸ್ಯೆಗೆ ಕಾರಣವಾಗಿತ್ತು. ಬೆಂಗಳೂರಿನಿAದ ಮಡಿಕೇರಿಗೆ ಬಸ್‌ಬರುವ ಸಂದರ್ಭ ತೊಂದರೆ ಆಗುತ್ತಿದ್ದುದನ್ನು ಮನಗಂಡ ಗ್ರಾ.ಪಂ. ಸದಸ್ಯ ಹರೀಶ್ ಮೊಣ್ಣಪ್ಪ ಕಾಡಾನೆಗಳು ಘೀಳಿಡುವ ಶಬ್ದಗಳ ಮಧ್ಯೆ ಕಟ್ಟಿಂಗ್ ಮಿಷನ್‌ನಿಂದ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.