ಗೋಣಿಕೊಪ್ಪಲು, ಜು. ೧೭: ಗೋಣಿಕೊಪ್ಪಲು ಕಾಫಿ ಮಂಡಳಿ ಆಶ್ರಯದಲ್ಲಿ ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಸಹಕಾರ ದೊಂದಿಗೆ ಫಾರ್ಮರ್ಸ್ ಅಸೋಸಿ ಯೇಷನ್ ಸಭಾಂಗಣದಲ್ಲಿ ಕಾಫಿ ಬೆಳೆಯ ಬಗ್ಗೆ ವಿಚಾರ ಸಂಕಿರಣ ನಡೆಯಿತು.

ಗೋಣಿಕೊಪ್ಪಲು ಕಾಫಿ ಮಂಡ ಳಿಯ ವಿಜ್ಞಾನಿ ಡಾ. ಮುಖಾಲಿಬ್ ಕಾಫಿ ಮಂಡಳಿಯಿAದ ಬೆಳೆಗಾರರಿ ಗಾಗಿ ಲಭ್ಯವಿರುವ ವಿವಿಧ ಯೋಜನೆ ಗಳ ಬಗ್ಗೆ ಮಾಹಿತಿ ನೀಡಿ ಬಾಳೆಲೆ ಭಾಗದಲ್ಲಿ ೧೦,೦೦೦ ಹೆಕ್ಟೇರ್ ಪ್ರದೇಶ ದಲ್ಲಿ ರೋಬಸ್ಟ ಕಾಫಿ ಬೆಳೆಯುತ್ತಿದ್ದು, ಮರುನಾಟಿಗೆ. ಕಾಫಿ ಒಣಗಿಸಲು ಸಿಮೆಂಟ್ ಕಣ. ತೋಟಕ್ಕೆ ನೀರು ಹಾರಿಸಲು ಪಂಪ್‌ಸೆಟ್ ವ್ಯವಸ್ಥೆಗೆ ಸಹಾಯ ಧನವಿರುವ ಬಗ್ಗೆ ಮಾಹಿತಿ ನೀಡಿದರು.

ಬಾಳೆಲೆಯನ್ನು ರೋಬಸ್ಟ ಬೆಳೆ ಯುವ ಭಾಗವೆಂದು ಗುರುತಿಸಿದ್ದು, ಈ ಭಾಗದಲ್ಲಿ ಹೊಸ ತೋಟ ಮಾಡುವವರಿಗೆ ರೋಬಸ್ಟ ತಳಿಗೆ ಮಾತ್ರ ಸಹಾಯಧನ ಲಭ್ಯವಿದ್ದು, ಇತ್ತೀಚಿನ ದಿನಗಳಲ್ಲಿ ಹವಾಮಾನ ಏರುಪೇರಾಗುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಮಳೆ, ಮಳೆಗಾಲದಲ್ಲಿ ಬಿಸಿಲು ಆಗುತ್ತಿದೆ. ಈ ನಿಟ್ಟಿನಲ್ಲಿ ತೋಟಗಳಲ್ಲಿ ನಿರ್ದಿಷ್ಟ ಪ್ರಮಾಣದ ನೆರಳಿನ ವ್ಯವಸ್ಥೆ ಬೇಕಾಗಿದೆ. ಹೂ ಮಳೆಯ ನಂತರ ಪ್ರತಿ ೨೦ ದಿನ ಕಾದು ಮತ್ತೊಮ್ಮೆ ನೀರು ಹಾಯಿಸಿ ಮುಂಗಾರು ಮಳೆ ಬೀಳುವ ತನಕ ಪ್ರತಿ ೨೦ ದಿನಕ್ಕೊಮ್ಮೆ ನೀರು ಕೊಡಬೇಕಾಗು ತ್ತದೆಯೆಂದು ಸಲಹೆ ನೀಡಿದರು.

ಬಾಳೆಲೆ ಫಾರ್ಮರ್ಸ್ ಅಸೋಸಿ ಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಹಿರಿಯ ವಿಸ್ತರಣಾ ಅಧಿಕಾರಿ ರಮಣ್, ಬಾಳೆಲೆ ಫಾರ್ಮರ್ಸ್ ಅಸೋಸಿ ಯೇಷನ್ ಕಾರ್ಯದರ್ಶಿ ಆದೇಂ ಗಡ ಮಂದಣ್ಣ, ಫಾರ್ಮರ್ಸ್ ಅಸೋ ಸಿಯೇಷನ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಕಾಫಿ ಬೆಳೆಗಾರರು ಹಾಜರಿದ್ದರು.