ಕುಶಾಲನಗರ, ಜು. ೧೭: ಕುಶಾಲನಗರ ವಲಯ ಅರಣ್ಯ ವ್ಯಾಪ್ತಿ ಯಲ್ಲಿ ಈ ಸಾಲಿನಲ್ಲಿ ಸುಮಾರು ೨೦ ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್ ತಿಳಿಸಿದ್ದಾರೆ. ಇಲ್ಲಿನ ಅರಣ್ಯ ಇಲಾಖೆ ಆಶ್ರಯದಲ್ಲಿ ಕಾವೇರಿ ರಿವರ್ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಕಾವೇರಿ ನದಿ ತಟದಲ್ಲಿ ಬರಡಿಯಿಂದ ಗುಡ್ಡೆಹೊಸೂರು ತನಕ ಸುಮಾರು ನಾಲ್ಕು ಸಾವಿರ ಗಿಡಗಳನ್ನು ನಾಟಿ ಮಾಡುವ ಯೋಜನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕುಶಾಲನಗರ ಅರಣ್ಯ ವಲಯದಲ್ಲಿ ಈಗಾಗಲೇ ೧೧ ಸಾವಿರ ಗಿಡಗಳನ್ನು ನೆಡಲಾಗಿದೆ. ಸರಕಾರದ ಕೋಟಿ ವೃಕ್ಷ ಯೋಜನೆ ಅಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜು ಮತ್ತು ಸಾರ್ವಜನಿಕ ಸ್ಥಳ ಗಳಲ್ಲಿ ಈಗಾಗಲೇ ೨೫೦೦ ಗಿಡ ಗಳನ್ನು ನೆಟ್ಟಿರುವುದಾಗಿ ಮಾಹಿತಿ ಒದಗಿಸಿದರು.

ಕಾವೇರಿ ನದಿ ತಟಗಳಲ್ಲಿ ಹೂವು ಹಣ್ಣು ಇತರ ಫಲಗಳು ಬರುವ ಗಿಡಗಳನ್ನು ಬೆಳೆಸಲಾಗುತ್ತಿದ್ದು ಮರಗಳ ಬೇರು ಮಣ್ಣು ನದಿಯ ಸವಕಳಿಯನ್ನು ತಡೆಗಟ್ಟುತ್ತದೆ ಎಂದು ಹೇಳಿದರು. ಹಲಸು, ಮಾವು, ಬೇವು, ಹೆಬ್ಬೇವು, ಸಂಪಿಗೆ ನೇರಳೆ, ಮಾಗನಿ ಮತ್ತಿತರ ಕಾಡು ಮರಗಳನ್ನು ನೆಡಲಾಗುತ್ತಿದೆ ಎಂದು ಶಿವರಾಂ ತಿಳಿಸಿದರು. ಈ ಸಂದರ್ಭ ಉಪಸ್ಥಿತ ರಿದ್ದ ರಾಷ್ಟಿçÃಯ ಹಸಿರುಪಡೆಯ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮ್ ಕುಮಾರ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ಮೂಲಕ ನಿರ್ವಹಣೆ ಮಾಡಲು ಅರಣ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾವೇರಿ ರಿವರ್ ಸೇವಾ ಟ್ರಸ್ಟ್ನ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ನದಿ-ಪ್ರಕೃತಿಯನ್ನು ಪ್ರತಿಯೊಬ್ಬರು ಆರಾಧಿಸುವಂತಾಗ ಬೇಕು. ಸ್ವಚ್ಛವಾಗಿ ಕಾವೇರಿ ನದಿ ಹರಿಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಎ.ವಿ. ಲಕ್ಷö್ಮಣ, ಅರಣ್ಯ ಇಲಾಖೆಯ ಉಪ ವಲಯ ಅಧಿಕಾರಿ ದೇವಯ್ಯ ಶ್ರವಣ್ ಕುಮಾರ್ ಮತ್ತು ಸಿಬ್ಬಂದಿಗಳು ಇದ್ದರು.