ಸೋಮವಾರಪೇಟೆ, ಜು. ೧೭: ಸಜ್ಜನ ಶಕ್ತಿ ಸದಾ ಜಾಗೃತವಿದ್ದರೆ ಮಾತ್ರ ದೇಶಕ್ಕೆ ಭವಿಷ್ಯ. ಭಾರತದ ಅಸ್ಮಿತೆಯಾಗಿರುವ ಹಿಂದುತ್ವ, ಸಂಸ್ಕೃತಿ, ಆಚಾರ ವಿಚಾರಗಳು ಉಳಿಯಬೇಕಾದರೆ ಸಜ್ಜನ ಶಕ್ತಿ ಸಕ್ರಿಯವಾಗಿರಬೇಕು ಎಂದು ಆರ್‌ಎಸ್‌ಎಸ್ ಕುಟುಂಬ ಪ್ರಬೋಧನ್ ವಿಭಾಗದ ಸಂಯೋಜಕ ಸುಬ್ರಾಯ ನಂದೋಡಿ ಅಭಿಪ್ರಾಯಿಸಿದರು.

ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸೋಮವಾರಪೇಟೆ ನಗರ ಶಾಖೆಯ ವತಿಯಿಂದ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಆರ್‌ಎಸ್‌ಎಸ್ ಆರಂಭಗೊAಡು ಮುಂದಿನ ೨೦೨೫ಕ್ಕೆ ೧೦೦ ವರ್ಷಗಳು ತುಂಬುತ್ತಿದ್ದು, ಈ ಸುದೀರ್ಘ ಅವಧಿ ಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳ ಬೇಕು. ಎಲ್ಲಾ ಮಂಡಲಗಳಲ್ಲೂ ನಿತ್ಯ ಶಾಖೆಯ ಗುರಿ ಹೊಂದಿರಬೇಕೆAದು ಸ್ವಯಂಸೇವಕರಿಗೆ ಕರೆ ನೀಡಿದ ಅವರು, ಸ್ವಾರ್ಥವನ್ನು ಮರೆತು, ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಸಂಕಲ್ಪದೊAದಿಗೆ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ ಎಂದರು.

ಸAಘವು ನಿತ್ಯ ಶಾಖೆಯ ಮೂಲಕ ಸಂಸ್ಕಾರವನ್ನು ತುಂಬುವ ಕಾರ್ಯ ಮಾಡುತ್ತಿದೆ. ಸಂಸ್ಕಾರಯುತ ಸಮಾಜದಿಂದ ಮಾತ್ರ ದೇಶ ಸುಭದ್ರ ಎಂಬುದನ್ನು ಮರೆಯಬಾರದು. ದೇಶದ ಸಂಸ್ಕೃತಿ ಆಚಾರ ವಿಚಾರಗಳ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ. ಸನಾತನ ಶ್ರೇಷ್ಠ ಸಂಸ್ಕೃತಿ ಯನ್ನು ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದು ಸುಬ್ರಾಯ ನಂದೋಡಿ ಅವರು ಅಭಿಪ್ರಾಯಿಸಿದರು.

ಮಕ್ಕಳಿಗೆ ಎಳೆಯ ವಯಸ್ಸಿ ನಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಮುಂದೆ ಅವರು ಸಮಾಜದ ಆಸ್ತಿಯಾಗಬೇಕೇ ಹೊರತು ದುಶ್ಚಟಗಳಿಗೆ ದಾಸರಾಗಿ ಸಮಾಜಕ್ಕೆ ಹೊರೆಯಾಗಬಾರದು. ಸದ್ಗುಣಗಳನ್ನು ಮೊದಲು ನಾವು ಅನುಷ್ಠಾನಗೊಳಿಸಬೇಕು ಎಂದ ಅವರು, ಜಾತಿ, ಭಾಷೆ, ಮಠ ಸಂಪ್ರದಾಯಗಳ ಒಡಕುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಾದ ಸಾಮಾಜಿಕ ಪರಿವರ್ತನೆ ಇಂದಿನ ಅಗತ್ಯವಾಗಿದೆ. ಪ್ರತಿಯೋರ್ವರೂ ಸಮಾಜ ಕಾರ್ಯಕ್ಕೆ ಸಮಯ ಮೀಸಲಿಡುವ ಸಂಕಲ್ಪ ತೊಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿಕ ಎನ್. ವಸಂತ್ ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ್ ಪದ್ಮನಾಭ್ ಉಪಸ್ಥಿತರಿದ್ದರು.