ಸುಂಟಿಕೊಪ್ಪ, ಜು. ೧೭ : ಸಮೀಪದ ಉಲುಗುಲಿ ತೋಟಕ್ಕೆ ಕಾಡಾನೆಗಳು ಲಗ್ಗೆಯಿಟ್ಟು ಕಾಫಿ ಗಿಡ, ನರ್ಸರಿಯಲ್ಲದ್ದ ಕಾಫಿ ಸಸಿಗಳನ್ನು ನಾಶ ಪಡಿಸಿವೆ. ಭಾನುವಾರ ರಾತ್ರಿ ಕಾಡಾನೆಗಳು ಕಾಫಿ ತೋಟಕ್ಕೆ ದಾಳಿ ಮಾಡಿ ಕಾಯಿ ಬಿಟ್ಟ ಕಾಫಿ ಗಿಡಗಳನ್ನು ನಾಶಪಡಿಸಿ ನಂತರ ತೋಟದ ಬಂಗಲೆ ಸಮೀಪವಿದ್ದ ನರ್ಸರಿಗೆ ಆಗಮಿಸಿ ಕಾಫಿ ಸಸಿಗಳನ್ನು ಹಾಗೂ ಹೂವಿನ ಕುಂಡಗಳನ್ನು ಹೊಡೆದು ಹಾಕಿವೆ.
ಇದರಿಂದ ಅಪಾರ ನಷ್ಟ ಸಂಭವಿಸಿದೆ. ತೋಟ ಕಾರ್ಮಿಕರು ಆನೆ ಹಾವಳಿಯಿಂದ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದು ಅರಣ್ಯ ಇಲಾಖೆಯವರು ಆನೆಗಳನ್ನು ನಾಡಿನಿಂದ ಕಾಡಿಗೆ ಅಟ್ಟುವ ಕಾರ್ಯವನ್ನು ಕೈಗೊಳ್ಳಬೇಕೆಂದು ತೋಟದ ರೈಟರ್ ಅಬ್ದುಲ್ ಸಲಾಂ ತಿಳಿಸಿದ್ದಾರೆ.