ಬೆಂಗಳೂರು, ಜು. ೧೬: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ ರಾಷ್ಟಿçÃಯ ತನಿಖಾ ದಳ ತೀವ್ರ ಹುಡುಕಾಟ ನಡೆಸುತ್ತಿದೆ.

ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಕಳೆದ ಜೂನ್ ೨೭ ರಂದು ಧ್ವನಿವರ್ಧಕಗಳ ಮೂಲಕ ಜೂನ್ ೩೦ರೊಳಗೆ ಶರಣಾಗುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಆರೋಪಿಗಳು ಶರಣಾಗಲಿಲ್ಲ. ಇದೀಗ ಶನಿವಾರ ಸುಳ್ಯ ಹಾಗೂ ಕೊಡಗಿನ ಗಡಿಭಾಗದಲ್ಲಿ ಧ್ವನಿ ವರ್ಧಕಗಳ ಮೂಲಕ ಶರಣಾಗಲು ಬೆಂಗಳೂರಿನ ಎನ್‌ಐಎ ಅಧಿಕಾರಿ ಗಳು ಎಚ್ಚರಿಕೆ ನೀಡಿದ್ದಾರೆ. ಆರೋ ಪಿಗಳ ಮನೆಗಳಿಗೂ ತೆರಳಿದ್ದ ಎನ್‌ಐಎ ಅಧಿಕಾರಿಗಳು ಎಚ್ಚರಿ ಕೆಯ ನೋಟೀಸ್‌ನ್ನೂ ಮನೆ ಬಾಗಿ ಲಿಗೆ ಅಂಟಿಸಿದ್ದಾರೆ. ಮುಂದಿನ ಆಗಸ್ಟ್ ೧೮ ರೊಳಗೆ ಶರಣಾಗುವಂತೆ ಎರಡನೇ ಬಾರಿ ಎಚ್ಚರಿಕೆ ನೀಡಿದ್ದು ಬೆಂಗಳೂರಿನ ಎನ್‌ಐಎ ಕೋರ್ಟ್ನ ಆದೇಶದ ಮೇರೆಗೆ ಈ ಎಚ್ಚರಿಕೆ ನೀಡ ಲಾಗಿದೆ. ಅದೇ ರೀತಿಯಾಗಿ ಆರೋ ಪಿಗಳ ಸುಳಿವು ನೀಡಿದರೆ ಬಹುಮಾನ ನೀಡುವುದಾಗಿ ಸಹ ಘೋಷಿಸಿದೆ.

ಕಳೆದ ಬಾರಿ ಶರಣಾಗತಿಗೆ ಮೂರು ದಿನಗಳ ಸಮಯಾವಕಾಶ ನೀಡಿದ್ದರೆ ಈ ಬಾರಿ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಶನಿವಾರ ಆರೋಪಿಗಳ ಮನೆಗೆ ಭೇಟಿ ನೀಡಿ ಅಧಿಕಾರಿಗಳು ವಿಚಾರಣೆ ನಡೆಸಿ ದ್ದಾರೆ. ಆರೋಪಿಗಳಾದ ಮುಸ್ತಫಾ ಪೈಚಾರ್, ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್ ತುಫೇಲ್, ಮಸೂದ್ ಅಗ್ನಾಡಿ ಸೇರಿ ಇನ್ನಿತ ರರಿಗಾಗಿ ಶೋಧ ನಡೆಯುತ್ತಿದೆ. ಹತ್ಯೆ ಆರೋಪಿಗಳಿಗೆ ಆಶ್ರಯ ನೀಡಿರು ವುದೂ ಸೇರಿ ಪ್ರಮುಖ ಆರೋಪಿ ಗಳಿಗೆ ಸಹಾಯ ಮಾಡಿದ ಆರೋಪ ಇವರುಗಳ ಮೇಲಿದೆ. ಪ್ರಕರಣಕ್ಕೆ ಸಂಬAಧಿಸಿ ಪ್ರಮುಖ ಆರೋಪಿ ಸೇರಿ ಈವರೆಗೆ ೧೬ ಮಂದಿಯನ್ನು ಬಂಧಿಸಲಾಗಿದೆ. ಈಗಾಗಲೇ ೨೧ ಜನ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು ಎನ್‌ಐಎ ಕೇರಳ ಮತ್ತು ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಹುಡುಕಾಟ ನಡೆಸಿದ್ದರೂ ಆರೋಪಿಗಳ ಸುಳಿವು ಸಿಕ್ಕಿಲ್ಲ.

ಇವರ ಪತ್ತೆಗೆ ಈಗಾಗಲೇ ಆರೋಪಿಗಳ ಭಾವಚಿತ್ರ ಇರುವ ವಾಂಟೆಡ್ ಲಿಸ್ಟ್ನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿದೆ ಅಲ್ಲದೆ ಆರೋಪಿಗಳ ಬಗ್ಗೆ ಸುಳಿವು ನೀಡುವು ಸಾರ್ವಜನಿಕರಿಗೆ ಎರಡರಿಂದ ಐದು ಲಕ್ಷ ರೂಪಾಯಿ ಗಳ ವರೆಗೆ ಬಹುಮಾನವನ್ನೂ ಘೋಷಿಸಲಾಗಿದೆ.

ಈಗಾಗಲೇ ಎನ್‌ಐಎ ಅಧಿಕಾರಿಗಳು ಕಂದಾಯ ಇಲಾಖೆ, ಸ್ಥಳೀಯ ಆಡಳಿತದಿಂದ ಆರೋಪಿಗಳ ಹೆಸರಿನಲ್ಲಿ ಇರುವ ಆಸ್ತಿ ಪಾಸ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೊಲೆಯಾದ ಪ್ರವೀಣ್ ನೆಟ್ಟಾರು ಮೇಲೆ ಆರೋಪಿಗಳಿಗೆ ವೈಯಕ್ತಿಕ ದ್ವೇಷ ಇಲ್ಲದಿದ್ದರೂ ಕೇವಲ ಧಾರ್ಮಿಕ ಮತಾಂಧತೆಯ ಕಾರಣಕ್ಕಾಗಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಈ ಕೊಲೆ ಮಾಡಿದ್ದಾರೆ ಎಂದು ಎನ್‌ಐಎ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

- ಕೋವರ್‌ಕೊಲ್ಲಿ ಇಂದ್ರೇಶ್