ಮಡಿಕೇರಿ, ಜು. ೧೬: ಜಮ್ಮಾ ಭೂಮಿ ಎನ್ನುವುದು ಯಾರೂ ಬಳು ವಳಿಯಾಗಿ ನೀಡಿದ ಭೂಮಿಯಲ್ಲ, ಇದು ಕೊಡವರ ಉಸಿರು ಮಾತ್ರವಲ್ಲ ಜನ್ಮಸಿದ್ಧ ಹಕ್ಕಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕೊಡವ ಎಂ.ಎ. ವಿಭಾಗದ ಉಪನ್ಯಾಸಕ ಬಾಚ ರಣಿಯಂಡ ಅಪ್ಪಣ್ಣ ತಿಳಿಸಿದ್ದಾರೆ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಂಗಣ ದಲ್ಲಿ ಕೊಡವ ಎಂ.ಎ.ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ನಡೆದ ಲೇಖಕಿ ಐಚಂಡ ರಶ್ಮಿ ಮೇದಪ್ಪ (ತಾಮನೆ-ಕೈಪಟ್ಟಿರ) ಬರೆದಿರುವ ಕೊಡವ ಮಕ್ಕಡ ಕೂಟದ ೬೭ನೇ ಪುಸ್ತಕ "ಚೆರ್ ಕತೆ ಮತ್ತು ಚೆರ್ ನಾಟಕ", ಲೇಖಕಿ ಕರವಂಡ ಸೀಮಾ ಗಣಪತಿ (ತಾಮನೆ- ಮಡೆಯಂಡ) ಬರೆದಿರುವ ಕೊಡವ ಮಕ್ಕಡ ಕೂಟದ ೬೮ನೇ ಪುಸ್ತಕ "ಕವನ ಪೊಟ್ಟಿ", ಕೊಡವ ಎಂ.ಎ ವಿದ್ಯಾರ್ಥಿಗಳಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಲೆ.ಕರ್ನಲ್ ಬಿ.ಎಂ. ಪಾರ್ವತಿ (ಬಲ್ಲಡಿಚಂಡ), ಐಚಂಡ ರಶ್ಮಿ ಮೇದಪ್ಪ, ಪುತ್ತರಿರ ವನಿತ ಮುತ್ತಪ್ಪ (ತಾಮನೆ-ಮನೆಯಪಂಡ), ಆಪಾಡಂಡ ಎನ್.ಹೇಮಾವತಿ (ಜಾನ್ಸಿ-ತಾಮನೆ-ಬೊಳ್ಳಾರ್‌ಪಂಡ), ಬೊಳ್ಳಜಿರ ಅಯ್ಯಪ್ಪ, ಚೌಂಡಿರ ಶಿಲ್ಪ ಪೊನ್ನಪ್ಪ (ತಾಮನೆ-ಚಿಕ್ಕಂಡ), ಬೊಳ್ಳಜಿರ ಯಮುನ ಅಯ್ಯಪ್ಪ (ತಾಮನೆ-ಮನ್ನೆರ) ಕರವಂಡ ಸೀಮಾ ಗಣಪತಿ ಬರೆದ ಕೊಡವ ಮಕ್ಕಡ ಕೂಟದ ೬೯ನೇ ಪುಸ್ತಕ "ದೇವತೆಯಡ ಮತ್ತು ಕೇಳಿಪೋನ ಯಿಂಗಡ ಪಾಟ್ ಕಥಾ ರೂಪ" ಹಾಗೂ ೭೦ನೇ ಪುಸ್ತಕ "ಜಾನಪದ ಕತೆ ಜೊಪ್ಪೆ" ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ಜಮ್ಮಾಜಾಗ ಮತ್ತು ತೋಕ್ ಹಕ್ಕು" ಕುರಿತು ವಿಚಾರ ಮಂಡನೆ ಮಾಡಿ ಮಾತನಾಡಿದ ಅಪ್ಪಣ್ಣ, ಕೊಡವ ಎಂಬ ಶಬ್ದದಲ್ಲಿ ೧೯ ಕೊಡವ ಭಾಷಿಕ ಮೂಲನಿವಾಸಿಗಳು ಅಡಗಿದ್ದಾರೆ. ಜಮ್ಮಾ ಎನ್ನುವುದು ಜನ್ಮ ಭೂಮಿ, ಇದು ಯಾವ ರಾಜರು ಅಥವಾ ಬ್ರಿಟಿಷರು ಬಳುವಳಿಯಾಗಿ ನೀಡಿದ ಭೂಮಿಯಲ್ಲ. ಹಿಂದಿನ ಕಾಲದಲ್ಲಿ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸ ಲಾಯಿತು. ಈ ಭೂಮಿ ಕೊಡವರ ಜನ್ಮಸಿದ್ಧ ಹಕ್ಕಾಗಿದೆ ಎಂದರು.

ಜಮ್ಮಾ ಇಲ್ಲದಿದ್ದರೆ ೧೯ ಮೂಲ ನಿವಾಸಿಗಳಿಗೆ ನೆಲೆ ಇಲ್ಲದಂತಾ ಗುತ್ತದೆ. ಜಮ್ಮಾಮಣ್ಣು ಕೊಡವರನ್ನು ಸಾಕಿ, ಬೆಳೆಸುತ್ತಿದೆ. ಇದನ್ನು ಎಂದಿಗೂ ಮಾರು ವಂತಿಲ್ಲ ಎಂದು ಪ್ರತಿಪಾದಿಸಿದರು.

ಸಾಹಿತಿ ಹಾಗೂ ಎಂ.ಎ. ಕೊಡವ ವಿಭಾಗದ ಉಪನ್ಯಾಸಕಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಭರದಲ್ಲಿ ಮಾತೃ ಭಾಷೆಯನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇ ಜಿನ ಪ್ರಾಂಶುಪಾಲ ಡಾ.ಮೇಜರ್ ರಾಘವ, ಬುಡಕಟ್ಟು ಸಮುದಾಯದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಭಾಷೆ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟರು. ಎಂ.ಎ ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ, ಮಾತನಾಡಿ, ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೊಡಗಿನ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಎಂ.ಎ ವಿದ್ಯಾರ್ಥಿ ಬೊಳ್ಳಜಿರ ಬಿ. ಅಯ್ಯಪ್ಪ ಕೊಡವ ಮಕ್ಕಡ ಕೂಟದ ವತಿಯಿಂದ ಹಲವು ಸಾಹಿತಿಗಳ ಪುಸ್ತಕವನ್ನು ಹೊರತಂದಿದ್ದು, ಕೂಟವು ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಎಂ.ಎ.ಕೊಡವ ವಿಭಾಗದ ಉಪ ನ್ಯಾಸಕಿ ಅಣ್ಣಳಪಂಡ ಧರ್ಮಶೀಲ ಅಜಿತ್ ಮಾತನಾಡಿ, ಎಂ.ಎ.ಕೊಡವ ಅಧ್ಯಯನದ ಕುರಿತು ಮಾಹಿತಿ ನೀಡಿದರು.

"ಚೆರ್ ಕತೆ ಮತ್ತು ಚೆರ್ ನಾಟಕ" ಪುಸ್ತಕ ಬರಹಗಾರ್ತಿ ಹಾಗೂ ಕೊಡವ ಎಂ.ಎ ವಿದ್ಯಾರ್ಥಿನಿ ಐಚಂಡ ರಶ್ಮಿ ಮೇದಪ್ಪ, "ಕವನ ಪೊಟ್ಟಿ" ಪುಸ್ತಕ ಬರಹಗಾರ್ತಿ ಹಾಗೂ ಕೊಡವ ಎಂ.ಎ.ವಿದ್ಯಾರ್ಥಿನಿ ಕರವಂಡ ಸೀಮಾ ಗಣಪತಿ ಹಾಗೂ ಎಂ.ಎ.ವಿದ್ಯಾರ್ಥಿ ಬೊಪ್ಪಂಡ ಶ್ಯಾಮ್ ಪೂಣಚ್ಚ ತಮ್ಮ ಶೈಕ್ಷಣಿಕ ಜೀವನ ಹಾಗೂ ಪುಸ್ತಕದ ಬಗ್ಗೆ ಮಾತನಾಡಿದರು. ಜನಾಂಗ ಬಾಂಧವರು ಕೊಡವ ಎಂ.ಎ ಗೆ ಸೇರ್ಪಡೆಗೊಂಡು ಕೊಡವ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಲು ಕೈಜೊಡಿಸುವಂತೆ ತಿಳಿಸಿದರು.

ಕೊಡವ ಎಂ.ಎ ವಿದ್ಯಾರ್ಥಿ ನಿಯರಾದ ಬೊಳ್ಳಾರ್‌ಪಂಡ ಎನ್. ಹೇಮಾವತಿ, ಐಚಂಡ ರಶ್ಮಿ ಮೇದಪ್ಪ ಪ್ರಾರ್ಥಿಸಿ, ಕರವಂಡ ಸೀಮಾ ಗಣಪತಿ ಸ್ವಾಗತಿಸಿ, ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ, ಪುತ್ತರಿರ ವನಿತ ಮುತ್ತಪ್ಪ ವಂದಿಸಿದರು. ಚೌಂಡಿರ ಶಿಲ್ಪ ಪೊನ್ನಪ್ಪ ಪುಸ್ತಕ ಪರಿಚಯ ಮಾಡಿದರು.