ಕೂಡಿಗೆ, ಜು. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಬೆಂಡೆ ಬೆಟ್ಟದ ಮೂಲಕ ಬಂದ ಮೂರು ಕಾಡಾನೆಗಳು ಹಾರಂಗಿ ನದಿ ಯನ್ನು ದಾಟಿ ಕಳೆದೆರಡು ದಿನ ಗಳಲ್ಲಿ ಅಪಾರÀ ಪ್ರಮಾಣದ ಬೆಳೆ ತುಳಿದು, ತಿಂದು ನಷ್ಟಪಡಿಸಿವೆ.
ಹುದುಗೂರು ಗ್ರಾಮದ ತಿಮ್ಮಪ್ಪ, ಲಕ್ಷಿö್ಮ, ಸ್ವಾಮಿ ಎಂಬ ವರಿಗೆ ಸೇರಿದ ಜಮೀನಿನಲ್ಲಿ ಬಾಳೆ, ಅಡಿಕೆ, ಕಾಫಿ ಗಿಡಗಳು ಸೇರಿದಂತೆ ಕೊಳವೆ ಬಾವಿ ಗಳಿಂದ ನೀರನ್ನು ಎತ್ತಲು ಅಳವಡಿಸಿದ ಪೈಪ್ಗಳನ್ನು ಹಾನಿಪಡಿಸಿವೆ. ಸ್ಥಳಕ್ಕೆ ಹುದು ಗೂರು ಉಪ ವಲಯ ಅರ ಣ್ಯಾಧಿಕಾರಿ ಸತೀಶ್ ಕುಮಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.