ಮಡಿಕೇರಿ, ಜು. ೧೬: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಬಳಕೆ ಮಾಡುತ್ತಿದ್ದ ಒಟ್ಟು ೨೫ ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸಲಾಗಿದ್ದು, ಈ ಪೈಕಿ ೧೪ ಪ್ರವಾಸಿಗರು ಸೇರಿದ್ದಾರೆ. ಕಳೆದ ೨ ದಿನಗಳ ಹಿಂದೆ ೧೭ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಇದೀಗ ಬಿರುಸಿನ ಕಾರ್ಯಾಚರಣೆ ನಡೆಸಿ ಮತ್ತಷ್ಟು ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿರುವುದು ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರವಾಗಿ ಮಾದಕ ವಸ್ತು ಮಾರಾಟ ಜಾಲವನ್ನು ಪತ್ತೆಹಚ್ಚುತ್ತಿರುವ ಪೊಲೀಸರು ‘ಡ್ರಗ್ಸ್ ಮುಕ್ತ ಜಿಲ್ಲೆ’ ಮಾಡುವತ್ತ ಪಣ ತೊಟ್ಟಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಂಡಬಾಣೆ ರಸ್ತೆ ಜಂಕ್ಷನ್ ಬಳಿ ದಾಳಿ ನಡೆಸಿದ ಪೊಲೀಸರು ಮೈಸೂರಿನ ಉದಯಗಿರಿಯ ಅಲಿಂ ಅಹಮ್ಮದ್ (೩೬), ಮಡಿಕೇರಿ ಹಿಲ್ ರಸ್ತೆ ನಿವಾಸಿ ಮೋಸಿನ್ (೪೫), ಮಹಿಳಾ ಸಮಾಜದ ಬಳಿ ಮಾದಕ ವಸ್ತು ಸೇವಿಸುತ್ತಿದ್ದ ಎಂ.ಎ. ಸಾಗರ್ (೨೨), ಎಂ.ಎಸ್. ರೆಹಮಾನ್ (೩೧), ಕೆ. ಚೇತನ್ (೨೩) ಎಂಬವರನ್ನು ಬಂಧಿಸಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ಕಾಲೇಜು ರಸ್ತೆಯಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಗೋಣಿಕೊಪ್ಪದ ಎಂ.ಎA. ಶಮೀರ್ (೩೭), ಎಂ. ಜಬ್ಬಾರ್ (೨೩), ನಿಸಾರ್ (೩೭) ಎಂಬವರನ್ನು ಬಂಧಿಸಿ ೩೭೦ ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಲೈಸನ್ಸ್ ರದ್ದು ಎಚ್ಚರಿಕೆ
ವಿವಿಧ ಪ್ರಕರಣಗಳಲಿ ಒಂದೇ ದಿನ ಒಟ್ಟು ೧ ಕೆಜಿ ೭೦೨ ಗ್ರಾಂ ಗಾಂಜಾ ಹಾಗೂ ಎಲ್ಎಸ್ಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಜಿಲ್ಲೆಯ ಆತಿಥ್ಯ ಕೇಂದ್ರಗಳಲ್ಲಿ ಮಾದಕ ವಸ್ತು ಬಳಕೆ, ಮಾರಾಟ ಕಂಡುಬAದಲ್ಲಿ ಮಾಲೀಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಈ ರೀತಿ ಪ್ರಕರಣ ಕಂಡುಬAದಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಲೈಸನ್ಸ್ ರದ್ದುಗೊಳಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಸಿದೆ. ಮಾದಕ ವಸ್ತು ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು, ಮಡಿಕೇರಿ ಡಿವೈಎಸ್ಪಿ ಎನ್. ಜಗದೀಶ್, ವೀರಾಜಪೇಟೆ ಡಿವೈಎಸ್ಪಿ ಆರ್. ಮೋಹನ್ ಕುಮಾರ್, ಮಡಿಕೇರಿ ಸಿಪಿಐ ಶಿವಶಂಕರ್, ಮಡಿಕೇರಿ ಪಿಎಸ್ಐಗಳಾದ ಶ್ರೀನಿವಾಸ್, ರಾಧ, ಗೋಣಿಕೊಪ್ಪ ಸಿಪಿಐ ಗೋವಿಂದರಾಜು, ಪಿಎಸ್ಐ ದೀಕ್ಷಿತ್ಕುಮಾರ್, ಸಿದ್ದಾಪುರ ಪಿಎಸ್ಐ ಮಂಜುನಾಥ್, ರಾಘವೇಂದ್ರ ಹಾಗೂ ಡಿಎಸ್ಆರ್ಬಿ ಸಿಬ್ಬಂದಿಗಳ ತಂಡವನ್ನು ರಚಿಸಿದ್ದರು.
ಮಡಿಕೇರಿ ಪ್ರವಾಸಕ್ಕಾಗಿ ಆಗಮಿಸಿ ಮಕ್ಕಂದೂರು ಗ್ರಾಮದ ಹೋಂಸ್ಟೇಯೊAದರಲ್ಲಿ ಮಾದಕ ವಸ್ತುಗಳ ಮಾರಾಟ ಜೊತೆಗೆ ಬಳಸುತ್ತಿದ್ದ ಮಂಗಳೂರು ನಿವಾಸಿಗಳಾದ ರಿತಿಕ್ (೨೩), ವಿಘ್ನೇಶ್ ಅಜಿತ್ (೨೧), ಸುಮನ್ ಹರ್ಷಿತ್ (೨೬), ಚಿರಾಗ್ ಸುನಿಲ್ (೨೪), ಮಂಜುನಾಥ್ (೩೦), ಲತೀಶ್ ನಾಯಕ್ (೩೨), ಸಚಿನ್ (೨೬), ರಾಹುಲ್ (೨೬), ಪ್ರಜ್ವಲ್ (೩೨), ಅವಿನಾಶ್ (೨೮), ಪ್ರತೀಕ್ ಕುಮಾರ್ (೨೭), ಧನುಷ್ (೨೮), ರಾಜೇಶ್ (೪೫), ದಿಲ್ರಾಜು (೩೦), ಮಡಿಕೇರಿ ನಿವಾಸಿ ಹೋಂಸ್ಟೇ ಮಧ್ಯವರ್ತಿ ಗಣೇಶ್ ಬಿ (೪೭), ಹೋಂಸ್ಟೇ ಮಾಲೀಕ ಸದಾಶಿವ ಬಿ.ಹೆಚ್ ಎಂಬವರನ್ನು ಬಂಧಿಸಿ ಅವರಿಂದ ೪೧೪ ಗ್ರಾಂ ತೂಕದ ಗಾಂಜಾ ಮತ್ತು ಎಲ್ಎಸ್ಡಿ ಮಾದಕ ವಸ್ತುಗಳನ್ನು ಸೆನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿ ಯ ಚನ್ನಯ್ಯನ ಕೋಟೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಚೆನ್ನಯ್ಯನಕೋಟೆ ನಿವಾಸಿ ಇಮ್ರಾನ್ (೩೧) ಎಂಬಾತನನ್ನು ಬಂಧಿಸಿ ಆತನಿಂದ ೧೯೦ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.