ವೀರಾಜಪೇಟೆ, ಜು. ೧೫: ವೀರಾಜಪೇಟೆ ತಾಲೂಕಿನ ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆಗೆ ‘ರಿ ಬಿಲ್ಡ್ ಕೊಡಗು’ ಸಂಸ್ಥಾಪಕ ಕೆ.ಎ. ಕುಶಾಲಪ್ಪ ಅವರು ತನ್ನ ತಂದೆ ದಿವಂಗತ ಕೆ.ಪಿ. ಅಯ್ಯಪ್ಪ ಅವರ ಜ್ಞಾಪಕಾರ್ಥ ತಂದೆಯ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ೬೦ ಹೊದಿಕೆಗಳನ್ನು ಉಚಿತವಾಗಿ ನೀಡಿದರು.

ಆಸ್ಪತ್ರೆಯ ಮುಖ್ಯ ಶಸ್ತçಚಿಕಿತ್ಸಕರು, ಮುಖ್ಯಾಧಿಕಾರಿಗಳಾದ ಡಾ.ಚಂದ್ರು ಅವರಿಗೆ ಹೊದಿಕೆಗಳನ್ನು ಹಸ್ತಾಂತರ ಮಾಡಿದರು.

ಆರ್.ಐ.ಹೆಚ್.ಪಿ. ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿ ಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕುಶಾಲಪ್ಪ ಅವರು ಮಾತನಾಡಿ, ತಂದೆಯ ಜನ್ಮ ದಿನದಂದು ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಕೊರತೆ ಕಾಣಿಸಿದ ರೋಗಿಗಳಿಗೆ ಉಪಯುಕ್ತವಾಗುವಂತೆ ಹೊದಿಕೆಗಳನ್ನು ನೀಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಿ ಬಿಲ್ಡ್ ಸಂಸ್ಥೆಯ ಸಂಚಾಲಕಿ ಪಾಲಂದಿರ ರಾಧ, ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.