ಸೋಮವಾರಪೇಟೆ, ಜು. ೧೫: ಇಲ್ಲಿನ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ. ೧೭ ರಿಂದ ಭುವನೇಶ್ವರಿ ದೇವಿಗೆ ಆಷಾಢ ಮಾಸದ ದುರ್ಗಾದೀಪ ನಮಸ್ಕಾರ ಪೂಜೆಯು ಒಂದು ತಿಂಗಳು ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ತಾ. ೧೭ ರಂದು ಬೆಳಿಗ್ಗೆ ೭ಗಂಟೆಗೆ ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಅಂದಿನಿAದ ಸಂಜೆ ೬ ರಿಂದ ೮ ರವರೆಗೆ ಪ್ರಥಮ ದಿನದ ದುರ್ಗಾದೀಪ ನಮಸ್ಕಾರ ಪೂಜೆಯು ನಡೆಯಲಿದ್ದು, ರಾತ್ರಿ ೮ ಗಂಟೆಯ ನಂತರ ಅನ್ನದಾನ ಏರ್ಪಡಿಸಲಾಗಿದೆ.
ಆಷಾಢ ಮಾಸದ ಪೂಜೆಯ ಅಂಗವಾಗಿ ಆಗಸ್ಟ್ ೧೫ ರಂದು ಬೆಳಿಗ್ಗೆ ೯ ಗಂಟೆಯಿAದ ೧೨ ಗಂಟೆಯವರೆಗೆ ಹೋಮ ಮತ್ತು ಅನ್ನದಾನ ನಡೆಯಲಿದೆ. ಕೊನೆಯ ದಿವಸದ ಪೂಜೆಯು ಆಗಸ್ಟ್ ೧೬ ರಂದು ಸಂಪನ್ನಗೊಳ್ಳಲಿದ್ದು, ಅಂದು ಸಂಜೆ ೬ ಗಂಟೆಯಿAದ ಶತ್ರುಸಂಹಾರ ಪೂಜೆಯು ನೆರವೇರಲಿದೆ. ನಂತರ ಅನ್ನದಾನದೊಂದಿಗೆ ಪೂಜಾ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ಕುಮಾರ್ ತಿಳಿಸಿದ್ದಾರೆ.
ಆಗಸ್ಟ್ ೧೨ ರಂದು ಶ್ರೀ ಅಯ್ಯಪ್ಪಸ್ವಾಮಿಗೆ ಶಾಸ್ತಾಪೂಜೆಯು ಸಂಜೆ ೬ ಗಂಟೆಗೆ ನಡೆಯಲಿದೆ. ದೇವಾಲಯದಲ್ಲಿ ಆಷಾಢ ಮಾಸದ ಒಂದು ತಿಂಗಳು ಪೂರ್ತಿ ಸಂಜೆ ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ. ಪೂಜೆ ಮತ್ತು ಹೆಚ್ಚಿನ ಮಾಹಿತಿಗೆ ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ಮೊ: ೯೪೪೮೫೮೫೫೦೯ ಅವರನ್ನು ಸಂಪರ್ಕಿಸಲು ಕೋರಲಾಗಿದೆ.