ಮಡಿಕೇರಿ, ಜು. ೧೪: ಅರಣ್ಯ ಉತ್ಪನ್ನವಾದ ಶ್ರೀಗಂಧದ ಮರದ ಸೊತ್ತುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಆಲ್ಟೊ ಕಾರು ನೋಂದಣಿ ಸಂಖ್ಯೆ: ಕೆಎ-೫೦ ಎಂ ೨೨೯೭ನ್ನು ಮಡಿಕೇರಿ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ : ೧೫/೨೦೨೨-೨೩ ದಿನಾಂಕ: ೦೮-೦೨-೨೦೨೩ ರಲ್ಲಿ ಅಮಾನತ್ತು ಪಡಿಸಿದ್ದು ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಯಲ್ಲಿದೆ.

ಈ ವಾಹನದ ಹಕ್ಕು ಬಾಧ್ಯತೆ ಸಲ್ಲಿಸುವ ಕುರಿತು ೩೦ ದಿನದೊಳಗೆ ಮಾಲೀಕತ್ವದ ಪೂರ್ಣ ದಾಖಲಾತಿಗಳೊಂದಿಗೆ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಹೆಚ್ಚಿನ ವಿವರಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿ ಮಡಿಕೇರಿ ಇಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.