ಮಡಿಕೇರಿ, ಜು. ೧೪: ಘೋಷಣೆಯಾಗಿ ೨ ವರ್ಷ ಕಳೆದರೂ ಪೊನ್ನಂಪೇಟೆ ತಾಲೂಕು ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಹಿನ್ನೆಲೆ ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರಿಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ನಿಯೋಗ ಮನವಿ ಸಲ್ಲಿಸಿತು.
ಜನರಿಗೆ ಸರಕಾರಿ ಸೇವೆ ಇನ್ನೂ ಲಭ್ಯವಾಗಿಲ್ಲ. ಭೂಮಿ ಕೇಂದ್ರದ ಸೌಲಭ್ಯವಿಲ್ಲ. ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದ ಭೂದಾಖಲೆಯ ಕಡತಗಳನ್ನು ವೀರಾಜಪೇಟೆ ತಾಲೂಕು ಕೇಂದ್ರದಲ್ಲಿಯೇ ಇದ್ದು, ಇದರಿಂದ ದೂರದ ಊರಿನಿಂದ ಅಲೆದಾಡ ಬೇಕಾಗಿದೆ. ಪೊನ್ನಂಪೇಟೆಯಲ್ಲಿ ಭೂಮಾಪನ ಕಚೇರಿ ತೆರೆಯಲು ಅವಶ್ಯ ಮೂಲಭೂತ ಸೌಲಭ್ಯವಿದೆ. ಆದರೆ, ಕಚೇರಿ ಪ್ರಾರಂಭಿಸದೆ, ಅಧಿಕಾರಿಗಳನ್ನು ನಿಯೋಜಿಸದೆ ನಿರ್ಲಕ್ಷö್ಯ ವಹಿಸಲಾಗಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿಸ್ತಿçÃರ್ಣ ಹೆಚ್ಚಿರುವ ಕಾರಣ ಉಪವಿಭಾಗಾಧಿಕಾರಿಯನ್ನು ಸೃಷ್ಟಿಸಿ ನೇಮಿಸುವಂತೆ ಒತ್ತಾಯಿಸಿತು.
ಪೊನ್ನಂಪೇಟೆ ತಾಲೂಕು ಕಚೇರಿ ಕಟ್ಟಡವನ್ನು ಅಗತ್ಯ ನವೀಕರಣ ಗಳೊಂದಿಗೆ ತಾಲೂಕು ಸೌಧವಾಗಿ ಪರಿವರ್ತಿಸಬೇಕು, ದಲ್ಲಾಳಿ ಹವಾಳಿ ತಡೆಗಟ್ಟಲು ಕ್ರಮವಹಿಸಬೇಕು, ಆರ್.ಟಿ.ಓ. ಅಧಿಕಾರಿಗಳು ಈ ಹಿಂದೆ ವಾಹನಗಳ ತಪಾಸಣೆಗೆ ಪೊನ್ನಂಪೇಟೆ ಮತ್ತು ವೀರಾಜಪೇಟೆಗೆ ಬರುತ್ತಿದ್ದರು ಆದರೆ, ಅದನ್ನು ದಿಢೀರ್ ಆಗಿ ಸಾರ್ವಜನಿಕರ ಗಮನಕ್ಕೆ ತಾರದೆ ರದ್ದುಗೊಳಿಸಿ ಗೋಣಿಕೊಪ್ಪದಲ್ಲಿ ನಡೆಸಲಾಗುತ್ತಿದೆ. ಇದನ್ನು ಸರಿಪಡಿಸಿ ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು, ಜಿಲ್ಲೆಯಲ್ಲಿ ಪಶುವೈದ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ವೈದ್ಯಾಧಿಕಾರಿಗಳನ್ನು ನೇಮಿಸಬೇಕು. ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಾಡಕಚೇರಿಯನ್ನು ಶೀಘ್ರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ನಿಯೋಗ ಮನವಿ ಸಲ್ಲಿಸಿ ಆಗ್ರಹಿಸಿದೆ.
ನಿಯೋಗದಲ್ಲಿ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಕಾರ್ಯಾಧ್ಯಕ್ಷ ಬಾಚೀರ ಕಾಶಿ ಕಾರ್ಯಪ್ಪ, ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಸಲಹೆಗಾರ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್ ಮತ್ತು ನಿರ್ದೇಶಕರುಗಳು ಹಾಜರಿದ್ದರು.