ಕರಿಕೆ, ಜು. ೧೫: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಬಾವಿ ದುರಸ್ತಿಪಡಿಸದೆ ಖಾಸಗಿಯವರ ಮನೆಯಿಂದ ಆರೋಗ್ಯ ಸಿಬ್ಬಂದಿ ಕುಡಿಯುವ ನೀರು ಹೊತ್ತು ತರುತ್ತಿದ್ದು, ವೈದ್ಯರು ರೋಗಿಗಳು ಕುಡಿಯುವ ನೀರಿಗೆ ಪರದಾಡುತ್ತಿರುವ ಬಗ್ಗೆ 'ಶಕ್ತಿ' ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಗ್ರಾಮ ಪಂಚಾಯಿತಿ ಬಾವಿಯು ತೀವ್ರ ಆಳ ಹೊಂದಿದ್ದು ನುರಿತ ಕಾರ್ಮಿಕರು ಮಾತ್ರ ಇಳಿಯಲು ಸಾಧ್ಯವಾದ ಕಾರಣ ಕೇರಳದಿಂದ ಕಾರ್ಮಿಕರನ್ನು ಕರೆಸಿ ಬಾವಿಯನ್ನು ಶುಚಿಗೊಳಿಸಿ ನೀರನ್ನು ಬಳಸಲು ವ್ಯವಸ್ಥೆ ಕಲ್ಪಿಸಿದೆ.
ಸುಧೀರ್ ಹೊದ್ದೆಟ್ಟಿ