ಮಡಿಕೇರಿ, ಜು. ೧೪: ಮರಗೋಡು ಗ್ರಾಮದ ಜನತಾ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸುದೀರ್ಘ ೩೪ ವರ್ಷಗಳು ಸೇವೆ ಸಲ್ಲಿಸಿ, ನಿವೃತ್ತರಾದ ಕೆ.ಟಿ. ರುಕ್ಮಿಣಿ ಅವರನ್ನು ಅಂಗನವಾಡಿ ಕೇಂದ್ರದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೂರ್ನಾಡು ವಲಯ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಹಾಗೂ ತಮ್ಮ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಸಮಾಜ ಸೇವೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆಯ ಬಗ್ಗೆ ಪ್ರಶಂಸಿಸಿದರು. ನಿವೃತ್ತಿ ಹೊಂದುತ್ತಿರುವ ರುಕ್ಮಿಣಿ ಅವರ ದೀರ್ಘ ಕಾಲದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮರಗೋಡು ವಲಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಜನತಾ ಕಾಲೋನಿ ಅಂಗನವಾಡಿ ಸಹಾಯಕಿ ರಮ್ಯ, ರುಕ್ಮಿಣಿ ಅವರ ಪತಿ ಕೃಷ್ಣಪ್ಪ ಉಪಸ್ಥಿತರಿದ್ದರು.