ಮಡಿಕೇರಿ, ಜು. ೧೪: ಹಿಂದೂ ಸಮಾಜದ ಮಹಾನ್ ಗುರು ಭಗವಾಧ್ವಜ ಎಂದು ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ರಾಜೇಶ್ ಪದ್ಮಾರ್ ವಿಶ್ಲೇಷಿಸಿದರು.

ಮಡಿಕೇರಿಯಲ್ಲಿ ಬುಧವಾರ ದಿನ ಜರುಗಿದ ಗುರುಪೂಜೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಹೆಡಗೆವಾರ್ ಅವರ ಅನಿಸಿಕೆಯಂತೆ ಭಗವಾಧ್ವಜವನ್ನು ಗುರು ಸ್ಥಾನದಲ್ಲಿ ಸ್ವೀಕರಿಸಲಾಗಿದೆ. ಹಿಂದೂ ಸಮಾಜದಲ್ಲಿ ಅನೇಕ ಗುರುಗಳಿದ್ದಾರೆ. ಒಂದೊAದು ವಿಭಾಗದಲ್ಲಿ ಒಂದೊAದು ಸಮುದಾಯಕ್ಕೆ ಅವರು ಗುರುಸ್ಥಾನ ಅಲಂಕರಿಸುತ್ತಾರೆ. ಯಾವುದೇ ಗುರು ತಪ್ಪೆಸಗಿದಾಗ ಅವರನ್ನು ಅನುಸರಿಸುತ್ತಿರುವ ಸಮುದಾಯದ ಮಂದಿ ಕೂಡ ಹಾದಿ ತಪ್ಪುತ್ತಾರೆ. ಈ ಹಿನ್ನೆಲೆಯಲ್ಲಿ ಸಮಗ್ರ ಹಿಂದೂ ಸಮಾಜ ಏಕ ಗುರುವನ್ನು ಅನುಸರಿಸಲು ಅಸಾಧ್ಯ. ಅದಕ್ಕೋಸ್ಕರ ಡಾ. ಹೆಡಗೆವಾರ್ ಇಡೀ ಸಮಾಜದ ಏಕ ಗುರುವಾಗಿ ಭಗವಾಧ್ವಜವನ್ನು ಪರಿಗಣಿಸಿದ್ದರು.

ಧ್ವಜ ಎಂದಾಗ ಅದು ಕೇವಲ ವಸ್ತçವಲ್ಲ, ಸಾಂಸ್ಕೃತಿಕ ಹಾಗೂ ಸಾಂಘಿಕ ಪ್ರತೀಕವಾಗಿದೆ. ಈ ಧ್ವಜ ಆರ್‌ಎಸ್‌ಎಸ್‌ಗೆ ಸೀಮಿತವಲ್ಲ ಹಿಂದುತ್ವದ ಮಾತೃ ಭೂಮಿಯ ಮಮತೆಯ ಪ್ರತೀಕವಾಗಿದೆ. ತ್ರೇತಾ ಯುಗದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ರಥದಲ್ಲಿ ಈ ಭಗವಾಧ್ವಜ ರಾರಾಜಿಸಿತ್ತು. ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಸಾರಥ್ಯದ ರಥದಲ್ಲಿಯೂ ವಿರಾಜಿಸಿತ್ತು. ಇಂತಹ ಮಹಾನ್ ರಾಷ್ಟç ಪ್ರೇಮದ ಹಿಂದುತ್ವ ಪ್ರತೀಕದ ಧ್ವಜವೇ ಭಗವಾಧ್ವಜವಾಗಿದೆ ಎಂದು ರಾಜೇಶ್ ಪದ್ಮಾರ್ ವಿಶ್ಲೇಷಿಸಿದರು.

೨೦೨೫ಕ್ಕೆ ಸಂಘದ ವಿಸ್ತರಣೆ

ರಾಷ್ಟಿçÃಯ ಸ್ವಯಂಸೇವಕ ಸಂಘವು ೧೯೪೦ರಲ್ಲಿ ಎಲ್ಲಾ ಪ್ರಾಂತ್ಯಗಳಿಗೆ ವಿಸ್ತರಣೆಗೊಂಡಿತ್ತು. ೧೯೮೦ ರಲ್ಲಿ ಎಲ್ಲಾ ಜಿಲ್ಲೆಗಳಿಗೂ ಪಸರಿಸಿತು. ೧೯೯೬ರಲ್ಲಿ ತಾಲೂಕು ಮಟ್ಟಗಳಲ್ಲಿಯೂ ವಿಸ್ತರಣೆಗೊಂಡಿತು. ಮುಂದಿನ ೨೦೨೫ಕ್ಕೆ ಎಲ್ಲಾ ಮಂಡಲಗಳಿಗೂ ವಿಸ್ತರಣೆಗೊಂಡು ಸಂಘದ ಚಟುವಟಿಕೆಗಳನ್ನು ವೃದ್ಧಿಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಅವರು ಈ ಸಂದರ್ಭ ಪ್ರಕಟಿಸಿದರು.

ವೇದವ್ಯಾಸರ ಜ್ಞಾನಭಂಡಾರ

ವೇದಗಳನ್ನು ಅನಾದಿ ಎಂದು ಕರೆಯಲಾಗಿದೆ. ಅಪೌರುಷೇಯ ಎಂದು ಹೇಳಲಾಗಿದೆ. ಭಾರತೀಯ ಜ್ಞಾನ ಪರಂಪರೆಯಲ್ಲಿ ಚಿಂತಕರು, ತಂತ್ರಜ್ಞರು, ತಪೋಬಲನಿರತರು ಉದ್ಘೋಷಿಸಿದ ಚಿಂತನೆಗಳೇ ತೂಕದ ಪರ್ವತದಂತೆ ವೇದಗಳಾಗಿ ಪರಿವರ್ತನೆಗೊಂಡವು. ಇಂತಹ ಜ್ಞಾನಭಂಡಾರದ ವೇದಗಳನ್ನು ವಿದ್ಯಾರ್ಥಿಗಳು ಸುಲಭದಲ್ಲಿ ಅರ್ಥೈಸಿಕೊಂಡು ಕಲಿಯಲು ಆದಿ ಗುರುಗಳೆನಿಸಿದ ವೇದವ್ಯಾಸರು ೪ ವೇದಗಳಾಗಿ ವಿಂಗಡಿಸಿದರು. ೧೮ ಪುರಾಣಗಳನ್ನು ಕೂಡ ರಚಿಸಿದರು ಎಂದು ರಾಜೇಶ್ ವಿವರಿಸಿದರು.

ಪ್ರತಿಕ್ರಿಯೆ ನಮ್ಮ ಜಾಯಮಾನವಲ್ಲ

ಆರ್‌ಎಸ್‌ಎಸ್ ಏಕ ವ್ಯಕ್ತಿಗೆ ಸೀಮಿತವಾದುದಲ್ಲ, ಸಾಂಘಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಾತೀಯ ಬೇಧಬಾವಗಳಿಲ್ಲದೆ ‘ನಾನು’ ಎಂಬ ಅಹಂಕಾರ ರಹಿತವಾಗಿ ಸಮುದಾಯದ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕಪುಟ್ಟ ವಿಷಯಗಳ ಬಗ್ಗೆಯೂ ಸಂಘದ ಹೆಸರನ್ನು ತಂದು ಆರೋಪಗಳನ್ನು ಹೊರಿಸುವುದು ಕೆಲವರಿಗೆ ಜಾಯಮಾನವಾಗಿಬಿಟ್ಟಿದೆ. ಇಂತಹ ಆರೋಪಗಳಿಗೆ ಸಂಘ ಎಂದಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ಸಾಮೂಹಿಕವಾಗಿ ತನ್ನ ಕೆಲಸವನ್ನು ಮೌನವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದೆ. ಹಾಗಾಗಿ ಇಂತಹ ಆರೋಪಗಳನ್ನು ನಿರ್ಲಕ್ಷö್ಯ ಮಾಡಿ ಮುನ್ನಡಿಯಿಡುವುದು ಸ್ವಯಂ ಸೇವಕರ ನಿಲುವುವಾಗಲಿ ಎಂದು ಅವರು ಈ ಸಂದರ್ಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶ್ರೀ ಕೋದಂಡರಾಮ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಹೆಚ್. ಮಂಜುನಾಥ್ ಅವರು, ಸಂಘದ ಇಂತಹ ಶಿಸ್ತಿನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

ಬೆಂಗಳೂರಿನ ಆರ್‌ಎಸ್‌ಎಸ್ ನಗರ ಕಾರ್ಯವಾಹ ಡಾ|| ಲಿಖಿತ್ ಸ್ವಾಗತಿಸಿದರು. ಮಡಿಕೇರಿ ನಗರ ಸಹ ಕಾರ್ಯವಾಹ ವಿವೇಕ್ ವಂದಿಸಿದರು. ಜಿಲ್ಲಾ ಸೇವಾಭಾರತಿಯ ಉಪಾಧ್ಯಕ್ಷ ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.