ಮಡಿಕೇರಿ, ಜು. ೧೪: ಮಡಿಕೇರಿ ತಾಲೂಕಿನ ಹೆರವನಾಡು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆವರಣದಲ್ಲಿ ಬೆಳೆದಿದ್ದ ಕಳೆ ಹಾಗೂ ಗಿಡಗಂಟಿಗಳನ್ನು ತೆಗೆದು ಆವರಣವನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಾಗೀರಥಿ ಹೆಗಡೆ ಅವರು ಸ್ವಚ್ಛತೆಗೆ ಸಹಕರಿಸಿದ ಪ್ರಭಣ್ಣ ಚೌಂಡಿರ ಅವರ ನೆರವನ್ನು ಸ್ಮರಿಸಿದರು.