ಶನಿವಾರಸAತೆ, ಜು. ೧೪: ಶನಿವಾರಸಂತೆ ಹೋಬಳಿ ನಾಡ ಕಚೇರಿಯಲ್ಲಿ ಸೋಮವಾರಪೇಟೆ ತಾಲೂಕು ಆಡಳಿತ ಕಂದಾಯ ಇಲಾಖೆ ವತಿಯಿಂದ ಮಂಗಳವಾರ ಪೌತಿ-ವಾರಸಾ ಖಾತೆ ಆಂದೋಲನ ನಡೆಯಿತು.
ಹೋಬಳಿ ವ್ಯಾಪ್ತಿಯ ದುಂಡಳ್ಳಿ ವೃತ್ತಕ್ಕೆ ಸಂಬAಧಿಸಿದ ಕಂದಾಯ ಗ್ರಾಮ ಹಾಗೂ ಉಪ ಗ್ರಾಮಗಳಿಗೆ ಸಂಬAಧಿಸಿದ ೮ ಮಂದಿ ರೈತರು ಮತ್ತು ಸಾರ್ವಜನಿಕರು ತಮ್ಮ ಆಸ್ತಿಗಳ ಪೌತಿ ಖಾತೆಗಾಗಿ ಪಹಣಿ, ಮರಣ ಹೊಂದಿದವರ ಮರಣ ಪ್ರಮಾಣಪತ್ರ, ಆಧಾರ್ ಕಾರ್ಡ್ ಹಾಗೂ ವಂಶ ವೃಕ್ಷದೊಂದಿಗೆ ಅರ್ಜಿ ಸಲ್ಲಿಸಿದರು. ಗ್ರಾಮಾಡಳಿತ ಅಧಿಕಾರಿ ಕೆ.ಎಸ್. ಸಂತೋಷ್ ಅರ್ಜಿ ಸ್ವೀಕರಿಸಿದರು. ಗ್ರಾಮ ಸಹಾಯಕ ಡಿ.ಬಿ. ಹೂವಯ್ಯ ಇದ್ದರು.