ಸಿದ್ದಾಪುರ, ಜು. ೧೪ : ಮಾವಿನ ಹಣ್ಣು ಇಟ್ಟಿದ್ದ ಬುಟ್ಟಿಯಲ್ಲಿ ಹಾವು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಯಿತು.
ಸಿದ್ದಾಪುರದ ಗುಹ್ಯ ಗ್ರಾಮದ ಜ್ಯೋತಿ ಪೊನ್ನಪ್ಪ ಎಂಬವರು ತಮ್ಮ ತೋಟದಲ್ಲಿ ಬೆಳೆದ ಮಾವಿನಕಾಯಿಯನ್ನು ಹಣ್ಣು ಮಾಡಲು ಸಣ್ಣ ಬುಟ್ಟಿಯಲ್ಲಿ ಟ್ಟಿದ್ದರು. ಗುರುವಾರದಂದು ಬುಟ್ಟಿಯೊಳಗಿದ್ದ ಮಾವಿನ ಹಣ್ಣು ತೆಗೆಯಲೆಂದು ಹೋದ ಸಂದರ್ಭದಲ್ಲಿ ಮಾವಿನ ಹಣ್ಣುಗಳ ಮೇಲೆ ಹಾವು ಇರುವುದು ಕಂಡುಬAದಿದೆ. ಕೂಡಲೇ ಉರಗ ರಕ್ಷಕ ಸುರೇಶ್ ಪೂಜಾರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಹಾವನ್ನು ಸೆರೆ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟರು.