ಹಣಕಾಸು ಸಚಿವರಾಗಿ ಅಜಿತ್ ಪವಾರ್

ಮುಂಬೈ, ಜು. ೧೪: ಮಹಾರಾಷ್ಟçದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಇತ್ತೀಚಿಗಷ್ಟೇ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಗಿದೆ. ಜುಲೈ ೨ ರಂದು ಅಜಿತ್ ಪವಾರ್ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎನ್‌ಸಿಪಿ ಎಂಟು ಸಚಿವರಿಗೂ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಧನಂಜಯ್ ಮುಂಡೆ ಅವರಿಗೆ ಕೃಷಿ, ದಿಲೀಪ್ ವಾಲ್ಸೆ-ಪಾಟೀಲ್ ಅವರಿಗೆ ಸಹಕಾರ ಖಾತೆ, ಹಸನ್ ಮುಶ್ರಿಫ್ ಅವರಿಗೆ ವೈದ್ಯಕೀಯ ಶಿಕ್ಷಣ, ಛಗನ್ ಭುಜಬಲ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಧರ್ಮರಾವ್ ಅತ್ರಮ್ ಅವರಿಗೆ ಆಹಾರ ಮತ್ತು ಔಷಧಗಳ ಆಡಳಿತ, ಸಂಜಯ್ ಬನ್ಸೋಡೆ ಅವರಿಗೆ ಕ್ರೀಡೆ, ಅದಿತಿ ತತ್ಕರೆ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅನಿಲ್ ಪಾಟೀಲ್ ಅವರಿಗೆ ಪರಿಹಾರ, ಪುನರ್ವಸತಿ ಮತ್ತು ವಿಪತ್ತು ನಿರ್ವಹಣೆ ಖಾತೆ ನೀಡಲಾಗಿದೆ. ೯ ಎನ್‌ಸಿಪಿ ಸಚಿವರ ಸೇರ್ಪಡೆಯೊಂದಿಗೆ ಮಹಾರಾಷ್ಟç ಸಚಿವ ಸಂಪುಟದಲ್ಲಿ ೨೯ ಕ್ಯಾಬಿನೆಟ್ ಮಂತ್ರಿಗಳಿದ್ದಾರೆ.

ದೆಹಲಿಯಲ್ಲಿ ಪ್ರವಾಹ : ನೀರಿನಲ್ಲಿ ಮುಳುಗಿ ೩ ಮಕ್ಕಳು ಸಾವು

ದೆಹಲಿ, ಜು. ೧೪: ದೆಹಲಿಯ ಈಶಾನ್ಯ ಜಿಲ್ಲೆಯ ಮುಕುಂದಪುರ ಪ್ರದೇಶದಲ್ಲಿ ಮಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಮಳೆಯ ನಂತರ ಶೇಖರಣೆಯಾದ ನೀರಿನಲ್ಲಿ ಸ್ನಾನ ಮಾಡಲು ಹೋದಾಗ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಧ್ಯಾಹ್ನ ೩ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮುಕುಂದಪುರದಲ್ಲಿ ಹೊಲವೊಂದು ನೀರಿನಿಂದ ತುಂಬಿತ್ತು. ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ಸಂಪೂರ್ಣ ಭರ್ತಿಯಾಗಿತ್ತು. ಇದರಲ್ಲಿ ಮೂವರು ಮಕ್ಕಳು ಸ್ನಾನಕ್ಕೆ ತೆರಳಿದ್ದರು. ನೀರಿನಲ್ಲಿ ಆಟವಾಡುತ್ತಿದ್ದ ಮೂವರೂ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸ್ ಪೇದೆಯೊಬ್ಬರು ಸ್ಥಳಕ್ಕೆ ಆಗಮಿಸಿ ನೀರಿಗೆ ಹಾರಿದರು, ಆದರೆ ಅಷ್ಟರಲ್ಲಿ ಮಕ್ಕಳು ಸಾವನ್ನಪ್ಪಿದ್ದರು. ದೆಹಲಿಯಲ್ಲಿ ಯಮುನಾ ನೀರಿನ ಮಟ್ಟದಲ್ಲಿ ನಿರಂತರ ಹೆಚ್ಚಳದಿಂದಾಗಿ ನಿರ್ಣಾಯಕ ಪರಿಸ್ಥಿತಿ ಉದ್ಭವಿಸಿದೆ. ಆಗ್ನೇಯ, ಮಧ್ಯ ದೆಹಲಿ, ಪೂರ್ವ ದೆಹಲಿ, ಈಶಾನ್ಯ ದೆಹಲಿಯ ಹಲವು ಪ್ರದೇಶಗಳಲ್ಲಿ ಸುತ್ತಲು ನೀರು ಆವರಿಸಿದೆ.

ಆಸ್ಟೆçÃಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರ ಗೂಂಡಾಗಿರಿ

ಆಸ್ಟೆçÃಲಿಯಾ, ಜು. ೧೪: ಆಸ್ಟೆçÃಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ನಾಲ್ವರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕಬ್ಬಿಣದ ರಾಡ್‌ಗಳಿಂದ ಹೊಡೆದಿದ್ದಾರೆ. ವಿದ್ಯಾರ್ಥಿಯನ್ನು ಥಳಿಸಿದ ನಂತರ ದಾಳಿಕೋರರು ಖಲಿಸ್ತಾನ್ ವಿಚಾರವನ್ನು ವಿರೋಧಿಸಿದರೆ ಇದೇ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ಟೆçÃಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರ ಅಟ್ಟಹಾಸ ಹೆಚ್ಚಾಗಿದ್ದು, ಇದೀಗ ನಡುರಸ್ತೆಯಲ್ಲೇ ಭಾರತೀಯರನ್ನೇ ಟಾರ್ಗೆಟ್ ಮಾಡಲು ಆರಂಭಿಸಿದ್ದಾರೆ. ವಿಧ್ವಂಸಕ ಕೃತ್ಯವೆಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ೨೩ ವರ್ಷದ ಭಾರತೀಯ ವಿದ್ಯಾರ್ಥಿಗೆ ಕೆಲವು ಬೆಂಬಲಿಗರು ಥಳಿಸಿದ್ದಾರೆ. ವಿದ್ಯಾರ್ಥಿಯ ತಲೆ, ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿವೆ.

ಬಾಲನಟಿ ಹೆಸರಿನಲ್ಲಿ ವಂಚನೆ-ಆರೋಪಿಗೆ ನ್ಯಾಯಾಂಗ ಬಂಧನ

ಬೆAಗಳೂರು, ಜು. ೧೪: ನಟ ಮಾಸ್ಟರ್ ಆನಂದ್ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ಜನರನ್ನು ವಂಚಿಸಿರುವ ನಿಶಾ ನರಸಪ್ಪಳನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ೩೯ನೇ ಎಸಿಎಂಎA ಕೋರ್ಟ್ ಆದೇಶ ಹೊರಡಿಸಿದೆ. ವಂಚನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಶಾ ನರಸಪ್ಪಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ನಂತರ ಕೋರ್ಟ್ ಮುಂದೆ ನಿಶಾಳನ್ನು ಹಾಜರುಪಡಿಸಿದ್ದರು. ಯಶಸ್ವಿನಿ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಆರೋಪಿ ನಿಶಾ ಎಂಬಾಕೆಯ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ-ಮಗಳನ್ನು ಆರೋಪಿ ಆಹ್ವಾನಿಸಿದ್ದರು. ಇದರಿಂದ ಮತ್ತಷ್ಟು ಹತ್ತಿರವಾಗಿದ್ದರು. ವಂಶಿಕಾ ಹೆಸರು ಹಾಗೂ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ, ಮಕ್ಕಳಿಗೆ ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕೊಡಿಸುತ್ತೇನೆ ಎಂದು ಜಾಹೀರಾತು ನೀಡುತ್ತಿದ್ದರು. ಫೋಟೋಶೂಟ್ ಹೆಸರಿನಲ್ಲಿ ಪೋಷಕರಿಂದ ಹಣ ಪಡೆಯುತ್ತಿದ್ದರು. ನಂತರ, ಯಾವುದೇ ಅವಕಾಶ ಕೊಡಿಸದೇ ಜನರನ್ನು ವಂಚಿಸುತ್ತಿದ್ದರು. ಇದುವರೆಗೂ ೧೭ ಜನರಿಗೆ ನಿಶಾ ವಂಚಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.