ಶ್ರೀಹರಿಕೋಟ, ಜು. ೧೪: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹಾತ್ವಾಕಾಂಕ್ಷೆಯ ಐತಿಹಾಸಿಕ ಚಂದ್ರಯಾನ-೩ ಯೋಜನೆಗೆ ಸಂಬAಧಿಸಿದAತೆ ಎಲ್.ವಿ.ಎಮ್-೩ ಲಾಂಚ್ ವೆಹಿಕಲ್ ಮೂಲಕ ಉಡಾವಣೆಗೊಂಡ ಚಂದ್ರಯಾನ-೩ ನೌಕೆಯನ್ನು ಯಶಸ್ವಿಯಾಗಿ ಭೂಮಿಯ ಕಕ್ಷೆಯಲ್ಲಿರಿಸಲಾಗಿದೆ. ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದ ಮೂಲಕ ಎಲ್.ವಿ.ಎಮ್-೩ ರಾಕೆಟ್ ಅಥವಾ ಲಾಂಚ್ ವೆಹಿಕಲ್ ಮಧ್ಯಾಹ್ನ ಸರಿಯಾಗಿ ೨:೩೫ಕ್ಕೆ ಯಶಸ್ವಿ ಉಡಾವಣೆಗೊಂಡು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಆಸಕ್ತರಲ್ಲಿ ಉತ್ಸಾಹ ತುಂಬಿತು. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಚಂದ್ರಯಾನ-೨ ಸಂದರ್ಭ ಅಧ್ಯರಾಗಿದ್ದ ಕೆ.ಸಿವನ್, ಇಸ್ರೋದ ಸಂಪೂರ್ಣ ತಂಡ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕೂಡ ಐತಿಹಾಸಿಕ ಕ್ಷಣದ ವೀಕ್ಷಣೆಯಲ್ಲಿ ಭಾಗಿಯಾಗಿದ್ದರು. ಚಂದ್ರಯಾನ-೩ ಉಡಾವಣೆಗೆ ಮೀಸಲಿದ್ದ

(ಮೊದಲ ಪುಟದಿಂದ) ಗ್ಯಾಲರಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಚಪ್ಪಾಳೆಯ ಮೂಲಕ ಇಸ್ರೋಗೆ ಪ್ರೋತ್ಸಾಹಿಸಿದರು.

ಸಾಲಿಡ್ ಸ್ಟೇಜ್, ಲಿಕ್ವಿಡ್ ಸ್ಟೇಜ್ ಹಾಗೂ ಕ್ರಯೋಜೆನಿಕ್ ಸ್ಟೇಜ್‌ಗಳೆಂಬ ಮೂರು ಹಂತಗಳಲ್ಲಿ ಚಂದ್ರಯಾನ-೩ ನೌಕೆಯನ್ನು ಹೊತ್ತೊಯ್ದ ರಾಕೆಟ್ ಅತಿವೇಗದಿಂದ ಸಾಗಿತು. ಮೊದಲ ಹಂತದ ಸಾಲಿಡ್ ಸ್ಟೇಜ್ ರಾಕೆಟ್ ಬೂಸ್ರ‍್ಸ್, ೨ನೆ ಹಂತದಲ್ಲಿ ಲಿಕ್ವಿಡ್ ಸ್ಟೇಜ್ ಬೂಸ್ರ‍್ಸ್ ಬಳಿಕ ಕೊನೆಯ ಹಂತದಲ್ಲಿ ಚಂದ್ರಯಾನ-೩ ನೌಕೆಗೆ ಹೊಂದಿಕೊAಡಿದ್ದ ಕ್ರೆöÊಯೋಜೆನಿಕ್ ಸ್ಟೇಜ್ ಕ್ರಮವಾಗಿ ಕಾರ್ಯಗತಗೊಂಡು ಆಗಸದೆತ್ತರಕ್ಕೆ ನೌಕೆಯನ್ನು ಕರೆದೊಯ್ದವು. ಇದರಿಂದ ಬೇರ್ಪಟ್ಟ ಚಂದ್ರಯಾನ-೩ ನೌಕೆಯನ್ನು ಭೂಮಿಯ ಕಕ್ಷೆಯಲ್ಲಿ ಇರಿಸಲಾಯಿತು. ಇವೆಲ್ಲ ಪ್ರಕ್ರಿಯೆಗಳು ಕೇವಲ ೧೫ ನಿಮಿಷದೊಳಗೆ ಮುಕ್ತಾಯಗೊಂಡವು. ಈ ಮೂಲಕ ಯೋಜನೆಯ ಮೊದಲ ಹಂತ ಪೂರ್ಣಗೊಂಡಿತು. ೨ನೆ ಹಂತದಲ್ಲಿ ಭೂಮಿಯ ಕಕ್ಷೆಯಿಂದ ಹೊರಬಂದು ಚಂದ್ರನೆಡೆಗೆ ಈ ಚಂದ್ರಯಾನ-೩ ನೌಕೆ ಸಾಗಲಿದ್ದು, ೩ನೆ ಹಂತದಲ್ಲಿ ಚಂದ್ರನ ಕಕ್ಷೆಯಲ್ಲಿ ಸುತ್ತುವುದರೊಂದಿಗೆ ಆಗಸ್ಟ್ ೨೩ ಅಥವಾ ೨೪ ರಂದು ಲ್ಯಾಂಡರ್ ಹಾಗೂ ರೋವರ್ ಅನ್ನು ಒಳಗೊಂಡ ಈ ಚಂದ್ರಯಾನ-೩ ನೌಕೆಯು ಚಂದ್ರನ ನೆಲಕ್ಕೆ ಕಾಲಿಡುವ ಮೂಲಕ ಭಾರತವು ಈ ಸಾಧನೆ ಮಾಡಿದ ೪ನೆ ರಾಷ್ಟç ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನಿರಂತರ ಟ್ರಾö್ಯಕಿಂಗ್

ಇದೀಗ ಭೂಮಿಯ ಕಕ್ಷೆಯಲ್ಲಿರುವ ಲ್ಯಾಂಡರ್-ರೋವರ್‌ಅನ್ನೊಳಗೊAಡ ಚಂದ್ರಯಾನ-೩ ನೌಕೆಯನ್ನು ಇನ್ನು ೧ ತಿಂಗಳುಗಳ ಕಾಲ ನಿರಂತರವಾಗಿ ಟ್ರಾö್ಯಕ್ ಮಾಡಲಾಗುತ್ತದೆ. ಈ ನೌಕೆಯು ಭೂಮಿಯನ್ನು ಪ್ರದಕ್ಷಿಸುತ್ತಾ ಇರಲಿದ್ದು ಈ ಸಂದರ್ಭ ಅದರ ನಿಖರ ಸ್ಥಳ, ವೇಗ, ಎತ್ತರದ ಮಾಹಿತಿ ಕಲೆಹಾಕಲು ಅದರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಅಗತ್ಯ. ಈ ಕಾರ್ಯಕ್ಕೆ ಇಸ್ರೋ ಮಾತ್ರವಲ್ಲದೆ, ಇತರ ರಾಷ್ಟçಗಳ ಬಾಹ್ಯಾಕಾಶ ಸಂಸ್ಥೆಗಳೂ ಕೈ ಜೋಡಿಸಿವೆ. ಯೂರೋಪಿಯನ್ ಸ್ಪೇಸ್ ಏಜನ್ಸಿಯು ಜರ್ಮನಿ, ಯು.ಕೆ ಹಾಗೂ ಫ್ರೆಂಚ್ ಗಿನಿಯಾದಲ್ಲಿನ ಕೇಂದ್ರಗಳ ಮೂಲಕ, ಜಪಾನ್ ರಾಷ್ಟçವು ಅಲ್ಲಿನ ಕೇಂದ್ರದ ಮೂಲಕ ಹಾಗೂ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯು ದೇಶದ ವಿವಿಧೆಡೆಗಳಲ್ಲಿನ ಕೇಂದ್ರಗಳ ಮೂಲಕ ಚಂದ್ರಯಾನ-೩ ನೌಕೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲಿವೆ. ಭೂಮಿಯ ಕಕ್ಷಾ ಪ್ರದಕ್ಷಿಣೆಯಿಂದ ಅಗತ್ಯ ವೇಗ ತಲುಪಿದ ಬಳಿಕ ನೌಕೆಯು, ಚಂದ್ರನೆಡೆಗೆ ಸಾಗಿ ಚಂದ್ರನ ಸುತ್ತ ಪ್ರದಕ್ಷಿಸಿ ವೇಗ ಕಡಿತಗೊಳಿಸಿದ ಬಳಿಕ ಆಗಸ್ಟ್ ೨೩ ಅಥವಾ ೨೪ ರಂದು ಚಂದ್ರನ ನೆಲ ತಲುಪುವ ನಿರೀಕ್ಷೆಯಿದೆ.

ಸೈಕಲ್ ಮೂಲಕ ಪ್ರಾರಂಭಗೊAಡ ಪಯಣ - ಸಚಿವ ಪ್ರಶಂಸೆ

ಉಡಾವಣೆ ವೀಕ್ಷಿಸಲು ಶ್ರೀಹರಿಕೋಟಾಗೆ ಆಗಮಿಸಿದ್ದ ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು, ಯಶಸ್ವಿ ಉಡಾವಣೆಯ ಬಳಿಕ ಸಾರ್ವ ಜನಿಕರು ಹಾಗೂ ಪತ್ರಕರ್ತ ರನ್ನು ಉದ್ದೇಶಿಸಿ ಮಾತನಾಡಿ, ಇಸ್ರೋ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಇಸ್ರೋ ಸ್ಥಾಪಕಾಧ್ಯಕ್ಷ ದಿ.ವಿಕ್ರಂ ಸಾರಾಬಾಯ್ ಅವರ ತ್ಯಾಗ, ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಸ್ರೋ ತನ್ನ ಮೊದಲ ರಾಕೆಟ್ ಉಡಾವಣೆ ಸಂದರ್ಭ ರಾಕೆಟ್ ಅನ್ನು ಲಾಂಚ್‌ಪ್ಯಾಡ್‌ಗೆ ಬೈಸಿಕಲ್ ಮೂಲಕ ಸಾಗಿಸಿದ್ದ ಪ್ರಸಂಗವನ್ನು ನೆನಪಿಸಿಕೊಂಡು ಸಾರಾಬಾಯ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಸ್ರೋದ ಪ್ರಸ್ತುತ ಅಧ್ಯಕ್ಷ ಸೋಮನಾಥ್, ಚಂದ್ರಯಾನ-೩ ಯೋಜನಾ ನಿರ್ದೇಶಕರಾದ ವೀರಾ ಮುತ್ತು, ಎಲ್.ವಿ.ಎಮ್ - ೩ ರಾಕೆಟ್ ನಿರ್ಮಾಣ ನಿರ್ದೇಶಕ ಮೋಹನ್ ಕುಮಾರ್ ಅವರುಗಳು ಕೂಡ ಈ ಸಂದರ್ಭ ಮಾತನಾಡಿ ಉಡಾವಣೆ ಯಶಸ್ಸಿಗೆ ಕಾರಣರಾದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.