ಶನಿವಾರಸಂತೆ, ಜು. ೧೪: ವಿದ್ಯಾರ್ಥಿಗಳು ಪದವಿ ಶಿಕ್ಷಣದ ನಂತರ ಭವಿಷ್ಯ ಜೀವನಕ್ಕೆ ಉತ್ತಮವಾದ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗುವಂತಹ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಪಟ್ಟಣದ ಭಾರತಿ ವಿದ್ಯಾಸಂಸ್ಥೆ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪದವಿ ಶಿಕ್ಷಣದಲ್ಲಿ ಪರಿಣತಿ ಹೊಂದಿದರೆ ಸಾಲದು. ಭವಿಷ್ಯ ಜೀವನದ ವೃತ್ತಿ ಆಯ್ಕೆ ವಿಷಯದ ಬಗೆಗೂ ಜಾಗೃತೆ ವಹಿಸಿ ವೃತ್ತಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಉನ್ನತ ವ್ಯಾಸಂಗವೋ ವೃತ್ತಿ ಜೀವನವೊ ಎಂಬ ಗೊಂದಲಕ್ಕೆ ಒಳಗಾಗದೇ ಗುರಿ ನಿರ್ಧರಿಸಿಕೊಳ್ಳಬೇಕು ಎಂದರು.

ಸAಪನ್ಮೂಲ ವ್ಯಕ್ತಿ ಹೆಚ್.ಎನ್. ಶರಣ್ ಮಾತನಾಡಿ, ಇಂದು ಯಾವುದೇ ವೃತ್ತಿಗೂ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಪ್ರತಿ ಕ್ಷೇತ್ರದಲ್ಲಿ ಕಂಪ್ಯೂಟರ್ ವಿಷಯದಲ್ಲಿ ಪರಿಣತಿ ಹೊಂದಿದರೆ ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ಸುಲಭವಾಗಿ ವೃತ್ತಿಯನ್ನು ಪಡೆಯಬಹುದು ಎಂದರು.

ಮುಖ್ಯ ಅತಿಥಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ಜಗನ್ ಪಾಲ್ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಂಡು, ದೃಢ ಸಂಕಲ್ಪ ಹೊಂದಿದರೆ ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಉತ್ತಮ ಉದ್ಯೋಗ ಗಳಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ ಮಾತನಾಡಿದರು. ಪ್ರಾಂಶುಪಾಲ ಈ.ಎಂ. ದಯಾನಂದ್, ರಾಷ್ಟಿçÃಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಎಂ.ಎನ್. ಹರೀಶ್, ಉಪನ್ಯಾಸಕರು ಇದ್ದರು.