ಕುಶಾಲನಗರ, ಜು. ೧೩: ಬುರ್ಖಾ ಧರಿಸಿ ಚಿನ್ನದ ಅಂಗಡಿಗಳಿಗೆ ನುಗ್ಗಿ ನಕಲಿ ಒಡವೆಗಳನ್ನು ಇರಿಸಿ ಅಸಲಿ ಚಿನ್ನಾಭರಣಗಳನ್ನು ದೋಚಿದ ಪ್ರಕರಣದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಇನ್ನೋರ್ವ ಮಹಿಳೆಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಶಾಲನಗರದ ಮಡಿಕೇರಿ ರಸ್ತೆಯಲ್ಲಿರುವ ಟಾಪ್ ಕೋ ಚಿನ್ನಾಭರಣ ಮಳಿಗೆಯಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗ್ರಾಹಕರ ಸೋಗಿನಲ್ಲಿ ನಕಲಿ ಚಿನ್ನಾಭರಣವನ್ನು ಇಟ್ಟು ಸುಮಾರು ೬೦ ಗ್ರಾಂ ಚಿನ್ನದ ಅಸಲಿ ಒಡವೆಯನ್ನು ದೋಚಿ ಪರಾರಿಯಾಗಿದ್ದಳು.
ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿ ಈ ಬಗ್ಗೆ ತನಿಖೆ ನಡೆಸಿದ ಕುಶಾಲನಗರ ಪಟ್ಟಣ ಪೊಲೀಸರು ಚಿತ್ರದುರ್ಗದ ಅನ್ಯಮ್ಮ ಅಲಿಯಾಸ್ ಅನಿದಿ (೩೬) ಎಂಬ ಮಹಿಳೆಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರ ತನಿಖಾ ತಂಡ ಕುಶಾಲನಗರದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.