ಕೂಡಿಗೆ, ಜು. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ತೆರವಾಗಿದ್ದ ಒಂದು ಸದಸ್ಯ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳು ಅಂಗೀಕಾರವಾಗಿವೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಕ್ಕೆ ಕೂಡ್ಲೂರು ಗ್ರಾಮದ ಕೆ.ಹೆಚ್. ಮಹೇಶ್ ಕುಮಾರ್ ಮತ್ತು ಕೆ. ಆರ್. ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಹಿಂಪಡೆಯಲು ತಾ. ೧೫ ರಂದು ಕೊನೆಯ ದಿನವಾಗಿದೆ, ತಾ.೨೩ ರಂದು ಚುನಾವಣೆಯು ನಡೆಯಲಿದೆ. ಚುನಾವಣಾ ಅಧಿಕಾರಿಗಳಾಗಿ ಸುಂಟಿಕೊಪ್ಪ ನಾಡ ಕಚೇರಿಯ ಉಪ ತಹಶೀಲ್ದಾರ್ ಶಿವಪ್ಪ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ರಾಜೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.