ಮಡಿಕೇರಿ, ಜು. ೧೩: ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕೊಡಗಿಗೆ ಪ್ರಾಕೃತಿಕ ವಿಕೋಪದ ಸಂದರ್ಭ ಭೇಟಿ ನೀಡಿದಾಗ ಅವರಿಗೆ ಬಿಜೆಪಿಯವರು ಮಾಡಿದ್ದ ಮೊಟ್ಟೆಯ ಸ್ವಾಗತಕ್ಕೆ ಕೊಡಗಿನ ಜನ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ. ಸಂವಿಧಾನದ ಆಶಯದಂತೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿ ಅನುಷ್ಠಾನಕ್ಕೆ ಮಂದಾಗಿದೆ. ಅದರಲ್ಲಿ ಸಣ್ಣಪುಟ್ಟ ಲೋಪಗಳನ್ನು ಹುಡುಕುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ.
ಇದು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಸದನದಲ್ಲಿ ಮಾತನಾಡಿದ ವಿಚಾರಗಳ ಪ್ರಮುಖ ಅಂಶ. ರಾಜ್ಯಪಾಲರ ಭಾಷಣಕ್ಕೆ ಸಂಬAಧಿಸಿದAತೆ ವಿಧಾನಸಭೆಯಲ್ಲಿ ಮಾತನಾಡಿದ ಪೊನ್ನಣ್ಣ ಅವರು, ಸರ್ಕಾರದ ಗ್ಯಾರಂಟಿ ಯೋಜನೆ, ಭ್ರಷ್ಟಾಚಾರ, ಕೊಡಗಿನಲ್ಲಿ ನಡೆದಿದ್ದ ಮೊಟ್ಟೆ ಎಸೆತ ಪ್ರಕರಣಗಳ ಬಗ್ಗೆ ಸವಿಸ್ತಾರವಾಗಿ ಸದನದ ಗಮನ ಸೆಳೆದರು.
(ಮೊದಲ ಪುಟದಿಂದ) ತಾನು ಕಂಡAತೆ ಯಾವುದೇ ಸರ್ಕಾರ ಕೂಡ ಸಂವಿಧಾನದ ಆಶಯಕ್ಕೆ ಅನುಗುಣ ವಾಗಿ ನೀತಿಯನ್ನು ರೂಪಿಸಿದ್ದರೆ ಅದು ಈ ಐದು ಗ್ಯಾರಂಟಿ ಯೋಜನೆಗಳು ಎಂದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ತನ್ನದೇ ಆದ ಸಮಸ್ಯೆಗಳಿಂದ ಬಳಲುತ್ತಿದೆ. ಇಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ಹಲವಾರು ವರ್ಷಗಳಿಂದ ಬಗೆಹರಿಸ ಲಾಗದಂ ತಹ ಸಮಸ್ಯೆಯಾಗಿದೆ. ಹಾಗೆಯೇ ಪ್ರಾಕೃತಿಕ ವಿಕೋಪಕ್ಕೆ ನಾವು ಪದೇ ಪದೇ ಗುರಿಯಾಗುತ್ತಾ ಬಂದಿದ್ದೇವೆ. ೨೦೨೨ನೇ ಇಸವಿಯಲ್ಲಿ ಅಂದಿನ ವಿಪಕ್ಷ ನಾಯಕರು, ಇಂದು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ನಮ್ಮ ಜಿಲ್ಲೆಗೆ ಪ್ರಕೃತಿ ವಿಕೋಪದಿಂದ ಸಂಕಷ್ಟವನ್ನು ವೀಕ್ಷಿಸಿ ಸಮಸ್ಯೆಯನ್ನು ಆಲಿಸಲು ಭೇಟಿ ನೀಡಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಆಗಿದ್ದಂತಹ ಕಳಪೆ ಕಾಮಗಾರಿಗಳನ್ನು ವೀಕ್ಷಿಸಲು ಆಗಮಿಸಿದ್ದರು. ಆ ಸಂದರ್ಭ ಬಿಜೆಪಿಯ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಮೊಟ್ಟೆಯಿಂದ ಸ್ವಾಗತಿಸಿದ್ದನ್ನು ನಾನಿಂದು ಸ್ಮರಿಸಿಕೊಳ್ಳುತ್ತಿದ್ದೇನೆ. ಜಿಲ್ಲೆಯ ಗಡಿ ಭಾಗ ಹಾಗೂ ಮಡಿಕೇರಿ, ಕುಶಾಲನಗರದಲ್ಲೂ ಘಟನೆ ನಡೆದಿತ್ತು. ನಂತರ ಇದರ ಬಗ್ಗೆ ಸದನದಲ್ಲೂ ಚರ್ಚೆಯಾಗಿತ್ತು. ಸದನದ ಚರ್ಚೆಯಲ್ಲಿ ವೀರಾಜಪೇಟೆ ಕ್ಷೇತ್ರದ ಅಂದಿನ ಶಾಸಕರು, ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ? ಮಾನ್ಯ ಸಿದ್ದರಾಮಯ್ಯ ಅವರೇ ನೀವು ಬಂದು ಹುಡುಕಬೇಕು ಎಂಬ ಮಾತನ್ನು ಹೇಳಿದ್ದರು. ಆದರೆ, ಇಂದು ಆ ಮೊಟ್ಟೆಗೆ ಹಾಗೂ ಅವರು ಆಡಿದ್ದ ಅಹಂಕಾರದ ಮಾತಿಗೆ ಜನ ಉತ್ತರ ಕೊಡುತ್ತಾ ನೀವು ಕಾಂಗ್ರೆಸ್ ಪಕ್ಷವನ್ನು ಎಲ್ಲೂ ಹುಡುಕುವುದು ಬೇಡ; ವಿಧಾನ ಸಭೆಯ ಕೊನೆಯ ಸಾಲಿನಲ್ಲಿ ಎರಡೂ ಶಾಸಕರು ಕೂತಿದ್ದಾರೆ ಎಂಬ ಉತ್ತರವನ್ನು ಕೊಟ್ಟಿದ್ದಾರೆ ಎಂದು ಪೊನ್ನಣ್ಣ ನುಡಿದರು. ಕೊಡಗಿನಲ್ಲಿ ನಡೆದಿರುವ ಎಲ್ಲಾ ಕಾಮಗಾರಿ ಕೂಡ ಅತೀ ಹೆಚ್ಚು ಭ್ರಷ್ಟಾಚಾರದಿಂದ ಮುಳುಗಿದ್ದನ್ನೂ ಜನ ನೋಡಿದ್ದಾರೆ. ನಾವು ಚುನಾ ವಣೆಗೆ ಹೋದಂತ ಸಂದರ್ಭದಲ್ಲಿ ಐದು ಗ್ಯಾರಂಟಿಗಳು ಮಾತ್ರವಲ್ಲ ಬಿಜೆಪಿ ಸರ್ಕಾರ ೪೦% ಸರ್ಕಾರ ಎಂಬ ಜನಪ್ರಿಯತೆಯನ್ನು ಪಡೆದಿ ದ್ದರ ಫಲವಾಗಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಈ ದೇಶದ ಜನ ಸಹಿಸುವುದಿಲ್ಲ ಎಂಬುದಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶವೇ ಒಂದು ಸಣ್ಣ ಉದಾಹರಣೆ ಎಂದು ಹೇಳಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯದಂತೆ ಅಂತಹ ಆರೋ ಪಗಳು ಕೂಡ ಬರದಂತೆ ಬಹಳ ಪಾರದರ್ಶಕವಾಗಿ ನೇಮಕಾತಿ ಮಾಡಿದರೆ ಮಾತ್ರ ಸರ್ಕಾರವನ್ನು ಉತ್ತಮವಾಗಿ ನಡೆಸಲು ಸಾಧ್ಯ. ಈ ಬಗ್ಗೆ ತಾವು ಗಮನಹರಿಸಬೇಕು ಎಂದು ಪೊನ್ನಣ್ಣ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಹೇಳಿದರು.