(ವಿಶೇಷ ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜು. ೧೨ : ಬಡವರ ಕಲ್ಯಾಣಕ್ಕಾಗಿ ತಾಲೂಕಿಗೊಂದು ಅಂಬೇಡ್ಕರ್ ಭವನ ನಿರ್ಮಾಣವನ್ನು ನಿರ್ಮಿಸಿ,. ಭವನದಲ್ಲಿ ಸರ್ಕಾರಿ ಸೇರಿದಂತೆ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸುವುದೇ ಸರ್ಕಾರದ ಉದ್ದೇಶ. ಇಂತಹ ಭವನ ನಿರ್ಮಾಣಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ವಿನಿಯೋಗಿಸುತ್ತಲೇ ಬಂದಿದೆ. ಆದರೆ ನಿಗದಿತ ಸಮಯದಲ್ಲಿ (ವಿಶೇಷ ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜು. ೧೨ : ಬಡವರ ಕಲ್ಯಾಣಕ್ಕಾಗಿ ತಾಲೂಕಿಗೊಂದು ಅಂಬೇಡ್ಕರ್ ಭವನ ನಿರ್ಮಾಣವನ್ನು ನಿರ್ಮಿಸಿ,. ಭವನದಲ್ಲಿ ಸರ್ಕಾರಿ ಸೇರಿದಂತೆ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸುವುದೇ ಸರ್ಕಾರದ ಉದ್ದೇಶ. ಇಂತಹ ಭವನ ನಿರ್ಮಾಣಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ವಿನಿಯೋಗಿಸುತ್ತಲೇ ಬಂದಿದೆ. ಆದರೆ ನಿಗದಿತ ಸಮಯದಲ್ಲಿ ಅಗತ್ಯವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನುದಾನ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ವೀರಾಜಪೇಟೆ ನಗರದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ಉದ್ಘಾಟನೆಗೆ ಇನ್ನೂ ಕೂಡ ಮುಹೂರ್ತ ಕೂಡಿ ಬಂದಿಲ್ಲ. ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾದ ಅಂಬೇಡ್ಕರ್ ಭವನವು ಇನ್ನೂ ಕೂಡ ಲಭ್ಯವಾಗದಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.ತಾಲೂಕಿಗೊಂದು ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು ಎಂಬುದು ಸರ್ಕಾರದ ನಿಯಮ. ಅದರಂತೆ ಕಳೆದ ೧೦ ವರ್ಷಗಳ ಹಿಂದೆ ಕೊಡಗಿನ ತಾಲೂಕು ಕೇಂದ್ರ ಗಳಲ್ಲೊಂದಾದ ವೀರಾಜಪೇಟೆಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿತ್ತು. ಖಾಲಿ ನಿವೇಶನಗಳ ಹುಡುಕಾಟದಲ್ಲಿದ್ದಾಗ ವೀರಾಜಪೇಟೆಯ ದಲಿತ ಸಂಘರ್ಷ ಸಮಿತಿಯ ಹಿರಿಯರಾದ ಎನ್.ವೀರಭದ್ರಯ್ಯ ಇವರ ಸಂಗಡಿಗರು ವೀರಾಜಪೇಟೆ ನಗರದ ತಾಲೂಕು ಕಚೇರಿಯ ಬಳಿಯ ಸರ್ಕಾರಿ ಜಾಗವನ್ನು ಕಂಡು ಹಿಡಿಯುವ ಮೂಲಕ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಅಂದಿನ ಜಿಲ್ಲಾಧಿಕಾರಿ ಯಾಗಿದ್ದ ಡಾ. ಬಲದೇವ ಕೃಷ್ಣ ಅವರು ವಿಶೇಷ ಆಸಕ್ತಿ ವಹಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬೇಕಾದ ನಿವೇಶನವನ್ನು ಮಂಜೂರು ಮಾಡಿದ್ದರು.
ಸರ್ಕಾರಕ್ಕೆ ಪತ್ರ ಬರೆದು ಅಂಬೇಡ್ಕರ್
(ಮೊದಲ ಪುಟದಿಂದ) ಭವನ ನಿರ್ಮಾಣಕ್ಕೆ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಆರಂಭವಾಯಿತಾದರೂ ನಂತರದ ವರ್ಷಗಳಲ್ಲಿ ಕಾಮಗಾರಿ ಕುಂಟುತ್ತಾ ಸಾಗಿತು. ಎರಡು ಅಂತಸ್ತಿನಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಕಟ್ಟಡವು ಉತ್ತಮ ಸಭಾಂಗಣ ಹಾಗೂ ಇತರ ಸೌಲಭ್ಯಗಳನ್ನು ಹೊಂದಿರುವ ಕಟ್ಟಡವಾಗಿದೆ. ನೆಲಮಹಡಿ, ಮೊದಲನೆ ಹಾಗೂ ಎರಡನೇ ಮಹಡಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿ ಎರಡು ವರ್ಷಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ ಗಡುವು ಮುಗಿದು ೮ ವರ್ಷಗಳು ಕಳೆದರೂ ಇನ್ನೂ ಕೂಡ ಕಾಮಗಾರಿಯೂ ಸಂಪೂರ್ಣಗೊAಡಿಲ್ಲ.
ಸರ್ಕಾರ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಲವು ಬಾರಿ ಬದಲಾದರೂ ಕಟ್ಟಡದ ಉದ್ಘಾಟನೆಗೆ ಮಾತ್ರ ಇನ್ನೂ ಕೂಡ ಕಾಲ ಕೂಡಿ ಬಂದಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಇದರ ಪ್ರಯೋಜನ ನೀಡಲು ಸಂಬAಧಿಸಿದವರು ಆಸಕ್ತಿ ವಹಿಸುತ್ತಿಲ್ಲ. ಇದರಿಂದಾಗಿ ಸರ್ಕಾರ ನೀಡಿದ ಅನುದಾನವು ನಿಗದಿತ ಸಮಯದಲ್ಲಿ ಬಳಕೆಯಾಗದೆ ಕಾಮಗಾರಿ ಪೂರ್ಣಗೊಂಡಿಲ್ಲ. ಅಂಬೇಡ್ಕರ್ ಭವನದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಸಾರ್ವಜನಿಕರು ಈ ಬಗ್ಗೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.