ಶನಿವಾರಸಂತೆ, ಜು. ೧೨: ಮಲೆನಾಡು ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬೆಂಗಳೂರಿನ ಜ್ಞಾನ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಶ್ರಮಿಸುತ್ತಿದ್ದು ಕೆ.ಎ.ಎಸ್. ಮತ್ತು ಐ.ಎ.ಎಸ್. ಪರೀಕ್ಷೆ ಎದುರಿಸಲು ಸಿದ್ಧರಿರುವ ವಿದ್ಯಾರ್ಥಿ ಗಳಿಗೆ ತರಬೇತಿ ಕೊಡಿಸಲಾಗುವುದು ಎಂದು ಟ್ರಸ್ಟ್ನ ನಿರ್ದೇಶಕ ಕೆ.ಕೆ. ತೀರ್ಥಾನಂದ್ ಹೇಳಿದರು.
ಸಮೀಪದ ಗಡಿಭಾಗ ಕಳಲೆ ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಅರಣ್ಯ ಇಲಾಖೆಯ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಟ್ರಸ್ಟ್ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಸ್ಫೋಕನ್ ಇಂಗ್ಲಿಷ್ ಕಲಿಕಾ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದ್ದು ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ಮುಖ್ಯ ಗುರಿಯಾಗಿದೆ ಎಂದರು.
ಅರಣ್ಯ ಅಧಿಕಾರಿ ಕುಮಾರ್ ಮಾತನಾಡಿ, ಪರಿಸರ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಪರಿಸರದ ಉಳಿವು-ಬೆಳೆವುಗಾಗಿ ಪ್ರತಿಯೊಬ್ಬರೂ ಒಂದೊAದು ಗಿಡ ನೆಟ್ಟು ಪೋಷಿಸಿ ಸಂರಕ್ಷಿಸಬೇಕು ಎಂದರು. ಮುಖ್ಯಶಿಕ್ಷಕಿ ಇಂದಿರಮ್ಮ ಮಾತನಾಡಿ, ದಾನಿಗಳ ಸಹಕಾರದಿಂದ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಿದೆ. ವೃಕ್ಷೋ ರಕ್ಷತಿ ರಕ್ಷಿತೋ ಎಂಬ ಉಕ್ತಿಯಂತೆ ಪರಿಸರವನ್ನು ಸಂರಕ್ಷಿಸದಿದ್ದರೇ ಮುಂದೊAದು ದಿನ ಕಾಡು ನಾಶವಾಗಿ ಕಾಡುಪ್ರಾಣಿಗಳ ಚಿತ್ರವನ್ನು ಗೋಡೆಯ ಮೇಲೆ ಬರೆಯುವ ಪ್ರಸಂಗ ಬರಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ಲಕ್ಷö್ಮಣ್ ಮಾತನಾಡಿ, ಜ್ಞಾನ ಸಮೃದ್ಧಿ ಚಾರಿಟಬಲ್ ಟ್ರಸ್ಟ್ನ ನಿರ್ದೇಶಕ ತೀರ್ಥಾನಂದರು ಮಾಡುತ್ತಿರುವ ಸಮಾಜಮುಖಿ ಸೇವೆ ಅವಿಸ್ಮರಣೀಯ. ಬಡ ವಿದ್ಯಾರ್ಥಿಗಳ ಬಗೆಗಿನ ಟ್ರಸ್ಟ್ನ ಕಾಳಜಿ ಸಂತಸ ಮೂಡಿಸಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಸಂಸ್ಥೆ ಕಾರ್ಯದರ್ಶಿ ಹೆಚ್.ಪಿ. ರವಿಕುಮಾರ್, ಸದಸ್ಯ ಹೆಚ್.ಕೆ. ಗಣೇಶ್, ಶಿಕ್ಷಕ ಹಾಗೂ ಕವಿ ವಸಂತ್ ಕರಬಸಪ್ಪ ಹುಳ್ಳೇರ, ಸಹಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.