ಮಡಿಕೇರಿ, ಜು. ೧೦: ಕೊಡಗು ಜಿಲ್ಲೆಯಲ್ಲಿ ಕಳೆದ ೯ ವರ್ಷಗಳಿಂದ ಮಾನಸಿಕ ಅಸ್ವಸ್ಥರ ಆರೈಕೆಯೊಂದಿಗೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಮಡಿಕೇರಿಯ ಸ್ನೇಹಾಶ್ರ್ರಯ ಯೂತ್ ಟ್ರಸ್ಟ್ನ ನಿರ್ದೇಶಕರಾದ ಸಿ.ವಿ. ವಿಶ್ವನಾಥ್ ಅವರಿಗೆ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ‘ಯುವ ವಿಕಾಸ ಶ್ರೀ’ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮ ತಾ.೧೨ರಂದು ಮೈಸೂರಿನ ಕಲಾಭವನದಲ್ಲಿ ನಡೆಯಲಿದೆ.